ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಫ್ಘಾನ್: 50 ಪಾಕಿಸ್ತಾನ ಸೈನಿಕರು ತಾಲಿಬಾನ್ ವಶದಲ್ಲಿ ? (Taliban | Pakistan | soldiers | Jalalabad | Afghanistan)
Bookmark and Share Feedback Print
 
ಅಫ್ಘಾನಿಸ್ತಾನದ ಗಡಿಭಾಗದ ವಾಯುವ್ಯ ಬುಡಕಟ್ಟು ಪ್ರದೇಶದ ಚೆಕ್ ಪೋಸ್ಟ್ ಸಮೀಪ ಪಾಕಿಸ್ತಾನ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿರುವ ಸಂದರ್ಭದಲ್ಲಿ ತಾಲಿಬಾನ್ ಉಗ್ರರು ದಾಳಿ ನಡೆಸಿದ್ದು, ಸುಮಾರು 50 ಮಂದಿ ಸೈನಿಕರು ನಾಪತ್ತೆಯಾಗಿರುವುದಾಗಿ ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.

ಮೊಹಮಂಡ್ ಬುಡಕಟ್ಟು ಜಿಲ್ಲೆಯ ಗ್ವಾರ್ ಪೋಸ್ಟ್ ಸಮೀಪ ಭಾನುವಾರ ತಾಲಿಬಾನ್ ಬಂಡುಕೋರರು ದಾಳಿ ನಡೆಸಿದ ಪರಿಣಾಮ ಏಳು ಮಂದಿ ಅರೆಸೇನಾ ಪಡೆ ಸೈನಿಕರು ಸಾವನ್ನಪ್ಪಿರುವುದಾಗಿ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.

ಗಡಿಭಾಗಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ 65ಮಂದಿ ಸೈನಿಕರಲ್ಲಿ 11 ಸೈನಿಕರು ಮಾತ್ರ ಸಂಪರ್ಕದಲ್ಲಿದ್ದಾರೆ. ಉಳಿದವರು ನಾಪತ್ತೆಯಾಗಿದ್ದು, ಅವರೆಲ್ಲ ತಾಲಿಬಾನ್ ಉಗ್ರರ ಒತ್ತೆಯಾಳಾಗಿರುವ ಸಾಧ್ಯತೆ ಇರುವುದಾಗಿ ಅಧಿಕಾರಿಗಳು ಶಂಕಿಸಿದ್ದಾರೆ.
ತಾಲಿಬಾನ್ ನಡೆಸಿದ ಪ್ರತಿದಾಳಿಯಲ್ಲಿ ಏಳು ಸೈನಿಕರು ಸಾವನ್ನಪ್ಪಿದ್ದು, ಉಳಿದ ಹತ್ತು ಮಂದಿಯನ್ನು ಸೆರೆ ಹಿಡಿದಿರುವುದಾಗಿ ತಾಲಿಬಾನ್ ವಕ್ತಾರ ತಿಳಿಸಿದ್ದಾನೆ. ಆದರೆ ಉಗ್ರರ ಹೇಳಿಕೆಯನ್ನು ಅಧಿಕಾರಿಗಳು ತಳ್ಳಿಹಾಕಿದ್ದಾರೆ.

ಆದರೂ ಸುಮಾರು 54ಸೈನಿಕರು ಕಣ್ಮರೆಯಾಗಿರುವುದಾಗಿ ಗಡಿಭಾಗದ ಸ್ಥಳೀಯ ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ. ಸೈನಿಕರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ