ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಾರ್ವಜನಿಕರ ಎದುರೇ 'ಮರಣದಂಡನೆ': ತಾಲಿಬಾನ್ ಶಿಕ್ಷೆ (Afghanista | public execution | North Waziristan | Taliban)
Bookmark and Share Feedback Print
 
ನೂರಾರು ಜನರ ಎದುರಿನಲ್ಲೇ ತಾಲಿಬಾನ್ ಉಗ್ರರು ಕೊಲೆ ಆಪಾದನೆಯಲ್ಲಿ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಕೊಂದಿರುವ ಘಟನೆ ಉತ್ತರ ವಜಿರಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ನಡೆದಿದೆ.

200 ಮಂದಿಯಷ್ಟು ನೆರೆದಿದ್ದ ಸ್ಥಳೀಯರ ಎದುರಿನಲ್ಲಿ ತಾಲಿಬಾನ್ ಉಗ್ರರು ಉತ್ತರ ವಜಿರಿಸ್ತಾನ್ ನಿವಾಸಿ 28ರ ಹರೆಯದ ವಾಹೀದ್ ಖಾನ್‌ ಎಂಬಾತನನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಹತ್ಯೆಗೈದಿದೆ. ಜೂನ್ 12ರಂದು ಈ ಯುವಕನನ್ನು ಗುಂಡಿಕ್ಕಿ ಸಾಯಿಸಲಾಗಿತ್ತು ಎಂದು ಸ್ಥಳೀಯರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಖಾನ್ ಎದೆಗೆ ತಾಲಿಬಾನ್ ಉಗ್ರರು ಮೂರು ಗುಂಡುಗಳನ್ನು ಹಾರಿಸಿ ಕೊಂದಿರುವುದಾಗಿ ಪ್ರತ್ಯಕ್ಷದರ್ಶಿಯೊಬ್ಬನ ಹೇಳಿಕೆಯನ್ನು ಉಲ್ಲೇಖಿಸಿ ಡೈಲಿ ಟೈಮ್ಸ್ ದೈನಿಕ ವರದಿ ಮಾಡಿದೆ. ತಾಲಿಬಾನ್ ಉಗ್ರರ ನ್ಯಾಯದ ನೀತಿಯನ್ನು ನೋಡಿ ಜನರು ದಂಗಾಗಿ ಹೋಗಿದ್ದರು ಎಂದು ಆತ ತಿಳಿಸಿದ್ದ.

ಬುಡಕಟ್ಟು ಪ್ರದೇಶದ ವ್ಯಕ್ತಿಯೊಬ್ಬ ತನ್ನ ಇಬ್ಬರು ಸಹೋದರರನ್ನು ಕೊಂದ ಆರೋಪದ ಹಿನ್ನೆಲೆಯಲ್ಲಿ ಜೂನ್ 8ರಂದು ಆ ವ್ಯಕ್ತಿಯನ್ನು ಸಾರ್ವಜನಿಕವಾಗಿ ಹತ್ಯೆಗೈಯಲು ಆದೇಶ ಕೊಟ್ಟಿತ್ತು. ಅಫ್ಘಾನಿಸ್ತಾನದಲ್ಲಿ ಅಮೆರಿಕ ಪಡೆಯ ಪರವಾಗಿ ಗೂಢಚರ್ಯೆ ಕೆಲಸ ಮಾಡುವ ವ್ಯಕ್ತಿಗಳನ್ನು ತಾಲಿಬಾನ್ ಉಗ್ರರು ನಿರ್ದಾಕ್ಷಿಣ್ಯವಾಗಿ ಕೊಲ್ಲುತ್ತಿರುವುದಾಗಿ ವರದಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ