ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಾನವನ ಪೂರ್ವಜ 'ಮಂಗ'ನಿಂದಲೇ ಬಂದದ್ದು ಟೀವಿ ಚಟ! (Television | Man | Monkey | Rhesus Macaque | Scientist | TV View)
Bookmark and Share Feedback Print
 
PTI
ಟೀವಿ ಧಾರಾವಾಹಿಗಳೆಂದರೆ ಬಿಡಿಸಲಾರದ ದುರಾಭ್ಯಾಸ ಇದ್ದಂತೆ ಎಂದೆಲ್ಲಾ ಹಳಿಯುತ್ತೇವೆ. ಆದರೂ ನಾವೆಲ್ಲರೂ ಟಿವಿಗೆ ಅಂಟಿಕೊಂಡಿದ್ದೇವೆ. ನಾವು ಟೀವಿಗೆ ಈ ಪರಿಯಾಗಿ ಜೋತುಬಿದ್ದಿರುವುದಕ್ಕೆ ಕಾರಣವೇನು? ಹೌದು, ಈ ಮೂರ್ಖರ ಪೆಟ್ಟಿಗೆ ವೀಕ್ಷಣೆಗೂ 'ಮಂಗನಿಂದ ಮಾನವ' ಎಂಬ ವಿಕಾಸವಾದಕ್ಕೂ ಥಳಕು ಹಾಕಬಲ್ಲ ಸಂಗತಿಯೊಂದನ್ನು ಜಪಾನೀಯರು ಪತ್ತೆ ಹಚ್ಚಿದ್ದಾರೆ. ಅದೆಂದರೆ, ಮಂಗಗಳಿಗೂ ಟೀವಿ ನೋಡುವುದೆಂದರೆ ಬಲು ಇಷ್ಟವಂತೆ!

ಈ ಕುರಿತು ಜಪಾನಿ ಸಂಶೋಧಕರು ರೀಸಸ್ ಮಕಾಕ ಎಂಬ 3 ವರ್ಷ ಪ್ರಾಯದ ಮಂಗನ ಮೇಲೆ ಪ್ರಯೋಗವೊಂದನ್ನು ಕೈಗೊಂಡು, ಈ ವರದಿ ಬಯಲಾಗಿಸಿದ್ದಾರೆ. ಅದಕ್ಕೆ ಸರ್ಕಸ್ ಆನೆ, ಜಿರಾಫೆ ಮತ್ತು ಹುಲಿ ಒಳಗೊಂಡಿದ್ದ ವೀಡಿಯೋ ತುಣುಕೊಂದು 'ಎದ್ದು ಹೋಗದಷ್ಟು' ಕುರ್ಚಿಗೆ ಅಂಟುವಂತೆ ಮಾಡಿತ್ತಂತೆ.

ನಿಯರ್-ಇನ್ಫ್ರಾರೆಡ್ ಸ್ಪೆಕ್ಟ್ರೋಸ್ಕೋಪಿ ಎಂಬ ವಿಧಾನ ಬಳಸಿ, ಮಂಗ ಟೀವಿ ನೋಡುತ್ತಿದ್ದಾಗ ಅದರ ಮೆದುಳಿಗೆ ರಕ್ತದ ಚಲನೆಯು ಯಾವ ರೀತಿ ಇರುತ್ತದೆ ಎಂಬುದನ್ನು ಸಂಶೋಧಕರು ಗಮನವಿಟ್ಟು ನೋಡಿದರು. ಸರ್ಕಸ್ ಆನೆ ಚಿತ್ರವಿಚಿತ್ರವಾಗಿ ವರ್ತಿಸುವಾಗ, ಏಕಾಗ್ರತೆಯಿಂದ ನೋಡುತ್ತಿದ್ದ ಈ ಮಂಗವೂ ಉತ್ತೇಜನಗೊಂಡು, ಅದರ ಮೆದುಳಿನ ಮುಂಭಾಗದ ಹಾಲೆ ಪ್ರದೇಶವು ಬಿರುಸಾಗಿ ಕ್ರಿಯಾತ್ಮಕವಾಗಿತ್ತಂತೆ.

ಇದು ಆ ಮಂಗ ಅನುಭವಿಸುತ್ತಿದ್ದ ಆನಂದದ ಪ್ರತೀಕ ಎಂದಿದ್ದಾರೆ ಜಪಾನಿ ವಿಜ್ಞಾನಿಗಳು. ನಮ್ಮ ಪೂರ್ವಜ ಎನ್ನಲಾಗುತ್ತಿರುವ ಮಂಗನಿಗೇ ಮೂರ್ಖರ ಪೆಟ್ಟಿಗೆ ಹಿಡಿಸಿದೆಯೆಂದಾದರೆ, ಮಾನವರಾದ ನಮ್ಮ ಟೀವಿ-ಪ್ರಿಯತೆಯ ಮೂಲ ಗೊತ್ತಾಯಿತಲ್ಲಾ... ಹಾಗಿದ್ದರೆ, ಎಲ್ಲರಿಗೂ ಗೊತ್ತಿರೋ ವಿಷಯವನ್ನೇ ಜಪಾನೀ ಸಂಶೋಧಕರು ಪತ್ತೆ ಹಚ್ಚಿದ್ದಾರೆ, ಇದರಲ್ಲೇನು ಮಹಾ ಎನ್ನುತ್ತೀರಾ?
ಸಂಬಂಧಿತ ಮಾಹಿತಿ ಹುಡುಕಿ