ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಗಾಜಾ ನಿರ್ಬಂಧ ಮುಕ್ತಿ ಯೋಜನೆಗೆ ಇಸ್ರೇಲ್ ಅಂಗೀಕಾರ (Israel | Gaza blockade | Hamas | Palestinian territory)
Bookmark and Share Feedback Print
 
ಹಮಾಸ್ ನಿಯಂತ್ರಣದಲ್ಲಿರುವ ಗಾಜಾ ಪಟ್ಟಿಯ ಮೇಲೆ ಹೇರಲಾಗಿರುವ ನಿರ್ಬಂಧವನ್ನು ತೆರವುಗೊಳಿಸಬೇಕು ಎಂದು ಭಾರೀ ಅಂತಾರಾಷ್ಟ್ರೀಯ ಒತ್ತಡಗಳಿಗೆ ಮಣಿದಿರುವ ಇಸ್ರೇಲ್, ಯಾವ ವಸ್ತುಗಳನ್ನು ಸಾಗಿಸಲು ಅವಕಾಶ ನೀಡಲಾಗುತ್ತದೆ ಎಂಬ ಕುರಿತು ಕೆಲ ಮಾಹಿತಿಗಳನ್ನಷ್ಟೇ ಬಿಡುಗಡೆಗೊಳಿಸಿದೆ.

ಪಾಲಿಸ್ತೇನ್ ಭೂಪ್ರದೇಶಕ್ಕೆ ತೆರಳುತ್ತಿದ್ದ ಫ್ರೀಡಂ ಪ್ಲೋಟಿಲ್ಲಾ ಹಡಗಿನ ಮೇಲೆ ಮೇ 31ರಂದು ಇಸ್ರೇಲ್ ದಾಳಿ ನಡೆಸಿದ ನಂತರ ನಿರ್ಬಂಧ ತೆರವುಗೊಳಿಸಬೇಕೆಂದು ಅಂತಾರಾಷ್ಟ್ರೀಯ ಒತ್ತಡ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಜಾರಿಯಲ್ಲಿರುವ ಗಾಜಾ ಪಟ್ಟಿಯ ಮೇಲಿನ ನಿರ್ಬಂಧವನ್ನು ತೆರವುಗೊಳಿಸಲು ಇಸ್ರೇಲ್ ಭದ್ರತಾ ಸಂಪುಟವು ನಿರ್ಧರಿಸಿದೆ.

ಇಸ್ರೇಲ್‌ನ ಈ ನೂತನ ಯೋಜನೆಯ ಪ್ರಕಾರ ಗಾಜಾ ಪಟ್ಟಿಯ ಮೇಲಿರುವ ಕೆಲವು ನಿರ್ಬಂಧಗಳನ್ನಷ್ಟೇ ಸಡಿಲಗೊಳಿಸಲಾಗುತ್ತದೆ. ಅಂತಾರಾಷ್ಟ್ರೀಯ ವೀಕ್ಷಣೆಯಡಿಯಲ್ಲಿ ನಾಗರಿಕ ಯೋಜನೆಗಳಿಗೆ ಬೇಕಾದ ಸಲಕರಣೆಗಳ ವಿಸ್ತರಣೆ ಮತ್ತು ನಾಗರಿಕ ಸರಂಜಾಮುಗಳನ್ನು ಗಾಜಾ ಪಟ್ಟಿಗೆ ಕಳುಹಿಸಲು ಅವಕಾಶ ನೀಡಲಾಗುತ್ತದೆ.

ಅದೇ ಹೊತ್ತಿಗೆ ಶಸ್ತ್ರಾಸ್ತ್ರಗಳು ಮತ್ತು ಯುದ್ಧ ಸಲಕರಣೆಗಳ ಸಾಗಾಟವನ್ನು ತಡೆಯುವ ನಿಟ್ಟಿನಲ್ಲಿ ಪ್ರಸಕ್ತ ಹೊಂದಿರುವ ಭದ್ರತಾ ವ್ಯವಸ್ಥೆಯನ್ನು ಇಸ್ರೇಲ್ ಮುಂದುವರಿಸುತ್ತದೆ ಎಂದು ಒತ್ತಿ ಹೇಳಲಾಗಿದೆ.

ಆದರೆ ಇದನ್ನು ಹಮಾಸ್ ತಳ್ಳಿ ಹಾಕಿದೆ. ಪ್ಲೋಟಿಲ್ಲಾ ಘಟನೆಯ ನಂತರ ಒತ್ತಡದಿಂದ ಮುಕ್ತವಾಗಲು ನಿರ್ಧರಿಸಿರುವ ಇಸ್ರೇಲ್ ಕ್ರಮ ಸಮಾಧಾನ ತಂದಿಲ್ಲ ಎಂದು ಹಿರಿಯ ನಾಯಕ ಇಸ್ಮಾಯಿಲ್ ರಾದ್ವಾನ್ ತಿಳಿಸಿದ್ದಾರೆ.

ಇಸ್ರೇಲ್‌ನ ಮಿತಿಯಿರುವ ನಿರ್ಬಂಧ ಮುಕ್ತಿಯ ಪ್ರಸ್ತಾಪವನ್ನು ನಾವು ತಳ್ಳಿ ಹಾಕುತ್ತಿದ್ದೇವೆ. ಅವರು ಅಂತಾರಾಷ್ಟ್ರೀಯ ಒತ್ತಡದಿಂದ ತಪ್ಪಿಸಿಕೊಳ್ಳಲು ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಗಾಜಾ ಪಟ್ಟಿಯ ಮೇಲಿನ ನಿರ್ಬಂಧವನ್ನು ಸಂಪೂರ್ಣವಾಗಿ ತೆಗೆದು ಹಾಕಬೇಕು ಎಂದು ಹಮಾಸ್ ಆಗ್ರಹಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ