ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಾನಿಷ್ಕ ವಿಮಾನ ಸ್ಫೋಟಕ್ಕೆ ಕೆನಡಾ ಸರ್ಕಾರ ಕಾರಣ (Kanishka bombing | terrorist attack | Air India | John Major,)
Bookmark and Share Feedback Print
 
1985ರಲ್ಲಿ ಕೆನಡಾ ಸರ್ಕಾರ ಸೂಕ್ತ ಎಚ್ಚರಿಕೆ ಕ್ರಮ ಕೈಗೊಂಡಿದ್ದರೆ ಏರ್ ಇಂಡಿಯಾ ವಿಮಾನ ದುರಂತ ತಡೆಯಬಹುದಿತ್ತು ಎಂದು 25 ವರ್ಷಗಳ ಕಾಲ ಕಾನಿಷ್ಕ ಬಾಂಬ್ ಸ್ಫೋಟ ತನಿಖಾ ಆಯೋಗದ ನ್ಯಾ.ಜಾನ್ ಮೇಜರ್ ನೇತೃತ್ವದ ಸಮಿತಿ ನೀಡಿದ ಶಿಫಾರಸುಗಳು.

ದುರಂತ ಕುರಿತಂತೆ ತನಿಖಾ ಸಂಸ್ಥೆಗಳ ನಡುವಿನ ವಿವಾದ ಪರಿಹರಿಸಲು ಪ್ರಬಲ ಮಧ್ಯವರ್ತಿ ಸಂಸ್ಥೆ ನೇಮಕ ಆಗಬೇಕು. ಮುಂದೆ ಇಂತಹ ದುರಂತ ತಪ್ಪಿಸುವ ನಿಟ್ಟಿನಲ್ಲಿ ಕೆನಡಾ ಭದ್ರತಾ ಸಲಹೆಗಾರರಿಗೆ ಕಠಿಣ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ನೀಡಬೇಕು. ಪೊಲೀಸ್ ಇಲಾಖೆ, ಗುಪ್ತಚರ ಇಲಾಖೆ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಲು ಕ್ರಮ ಕೈಗೊಳ್ಳಬೇಕೆಂದು ಸಮಿತಿ ಶಿಫಾರಸು ಮಾಡಿದೆ.

ಇದು ಕೆನಡಾ ಇತಿಹಾಸದಲ್ಲಿ ನಡೆದ ಅತಿ ದೊಡ್ಡ ಹತ್ಯಾಕಾಂಡವಾಗಿದೆ ಎಂದು ಮೇಜರ್ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಏರ್ ಇಂಡಿಯಾ ವಿಮಾನ 1985ರ ಜೂನ್ 23ರಂದು ಕೆನಡಾದಿಂದ ಭಾರತಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಅಟ್ಲಾಂಟಿಕ್ ಸಮೀಪ ಉಗ್ರರು ನಡೆಸಿದ ದಾಳಿಗೆವಿಮಾನದಲ್ಲಿದ್ದ 329 ಪ್ರಯಾಣಿಕರು ಸಾವನ್ನಪ್ಪಿದ್ದರು.
ಸಂಬಂಧಿತ ಮಾಹಿತಿ ಹುಡುಕಿ