ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಉಗ್ರರಾಗಲು ಕರೆ ನೀಡಿದ್ದ ಭಾರತೀಯನಿಗೆ ಇಂಗ್ಲೆಂಡ್ ನಿಷೇಧ (Muslim | terrorist | Zakir Naik | England)
Bookmark and Share Feedback Print
 
ಪ್ರತಿಯೊಬ್ಬ ಮುಸ್ಲಿಮನೂ ಭಯೋತ್ಪಾದಕನಾಗಬೇಕು ಎಂದು ಕರೆ ನೀಡಿದ್ದ ಭಾರತೀಯ ಪ್ರವಚನಕಾರನೊಬ್ಬನ ಮೇಲೆ ಇಂಗ್ಲೆಂಡ್ ಸರಕಾರ ನಿಷೇಧ ಹೇರಿದೆ. ಆತ ದೇಶ ಪ್ರವೇಶಿಸುವಂತಿಲ್ಲ ಎಂದು ಗೃಹ ಕಾರ್ಯದರ್ಶಿ ತಿಳಿಸಿದ್ದಾರೆ.

ಝಾಕೀರ್ ಅಬ್ದುಲ್ ಕರೀಂ ನಾಯ್ಕ್ ಎಂಬ 44ರ ಹರೆಯದ ಮುಂಬೈಯ ಈ ಪ್ರವಚನಕಾರ ಲಂಡನ್ ಮತ್ತು ಉತ್ತರ ಇಂಗ್ಲೆಂಡ್‌ಗಳಲ್ಲಿ ಧಾರ್ಮಿಕ ಬೋಧನೆಗಳನ್ನು ನೀಡಬೇಕಿತ್ತು. ಆದರೆ ಆತನ ಮೇಲೆ ನಿಷೇಧ ಹೇರಲಾಗಿದೆ ಎಂದು ಬ್ರಿಟನ್ ಗೃಹ ಕಾರ್ಯದರ್ಶಿ ಥೆರೆಸಾ ಮೇ ಪ್ರಕಟಿಸಿದ್ದಾರೆ.
PR

ಡಾ. ನಾಯ್ಕ್ ಬ್ರಿಟನ್ ಪ್ರವೇಶಿಸದಂತೆ ನಾನು ನಿರ್ಬಂಧ ಹೇರುತ್ತಿದ್ದೇನೆ. ಈ ಹಿಂದೆ ಡಾ. ನಾಯ್ಕ್ ನೀಡಿದ್ದ ಹಲವು ಹೇಳಿಕೆಗಳೇ ನನಗೆ ಅವರ ಅಸ್ವೀಕಾರಾರ್ಹ ವರ್ತನೆಯ ಸಾಕ್ಷ್ಯ ಎಂದು ಮೇ ತಿಳಿಸಿದ್ದಾರೆ.

ಇಂಗ್ಲೆಂಡ್‌ಗೆ ಬರುವುದು ಹೆಮ್ಮೆಯೇ ಹೊರತು, ಹಕ್ಕಲ್ಲ. ಸಾರ್ವಜನಿಕರಿಗೆ ಅನುಕೂಲತೆಯನ್ನು ಒದಗಿಸದ ವ್ಯಕ್ತಿಗಳನ್ನು ನಮ್ಮ ದೇಶಕ್ಕೆ ಪ್ರವೇಶಿಸಲು ಅವಕಾಶ ನೀಡುವುದಕ್ಕೆ ನಾನು ಬದ್ಧಳಾಗಿಲ್ಲ ಎಂದು ಅವರು ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ನಾಯ್ಕ್ ಹೇಳಿದ್ದೇನು..?
2006ರಲ್ಲಿ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾಗಿರುವ ವೀಡಿಯೋದಲ್ಲಿ ಝಾಕೀರ್ ನಾಯ್ಕ್ ಹೇಳಿಕೆಯಿದೆ. ಈ ಸಂದರ್ಭದಲ್ಲಿ ನೂರಾರು ಮಂದಿ ಆಸಕ್ತರು ಈತನ ಪ್ರವಚನವನ್ನು ಕೇಳುತ್ತಿದ್ದರು. ಅದರ ಯಥಾವತ್ ಅನುವಾದ ಇಲ್ಲಿದೆ.

'ಒಸಾಮಾ ಬಿನ್ ಲಾಡೆನ್ ಧರ್ಮಿಯೋ ಅಥವಾ ಅಧರ್ಮಿಯೋ ಎನ್ನುವ ಮುಸ್ಲಿಮರ ಬಗ್ಗೆ ಎಚ್ಚರಿಕೆಯಿಂದಿರಿ. ನಾನು ಅವರ ಮಾತುಗಳನ್ನು ಒಪ್ಪಿಕೊಳ್ಳಲಾರೆ. ನಮಗೆ ಯಾವ ವಿಚಾರವೂ ತಿಳಿದಿಲ್ಲ..'

'ಆದರೆ ನೀವು ನನ್ನ ಅಭಿಪ್ರಾಯವನ್ನು ಕೇಳುವಿರಾದರೆ, ಸತ್ಯವನ್ನೇ ಹೇಳುವುದಾದರೆ, ಒಸಾಮಾ ಇಸ್ಲಾಮ್ ವೈರಿಗಳ ವಿರುದ್ಧ ಹೋರಾಟ ಮಾಡುತ್ತಿದ್ದಾನಾದರೆ, ನಾನು ಆತನ ಪರವಾಗಿದ್ದೇನೆ. ಆತ ಏನು ಮಾಡುತ್ತಿದ್ದಾನೆ ಎಂಬುದು ನನಗೆ ಗೊತ್ತಿಲ್ಲ. ನಾನು ಆತನ ಜತೆ ಸಂಪರ್ಕದಲ್ಲಿಲ್ಲ. ಆತನನ್ನು ವೈಯಕ್ತಿಕವಾಗಿಯೂ ನಾನು ಬಲ್ಲವನಲ್ಲ. ನಾನು ಪತ್ರಿಕೆಗಳಲ್ಲಷ್ಟೇ ಓದಿದ್ದೇನೆ...'

'ಆತ ಭಯೋತ್ಪಾದಕರನ್ನೇ ಹೆದರಿಸುತ್ತಿರುವುದಾದರೆ, ಬಹುದೊಡ್ಡ ಉಗ್ರವಾದಿ ಅಮೆರಿಕಾ ಎಂಬ ಭಯೋತ್ಪಾದಕ ರಾಷ್ಟ್ರವನ್ನೇ ಹೆದರಿಸುತ್ತಿದ್ದಾನಾದರೆ, ಪ್ರತಿಯೊಬ್ಬ ಮುಸ್ಲಿಮ್ ಕೂಡ ಭಯೋತ್ಪಾದಕನಾಗಬೇಕು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಆತ ಭಯೋತ್ಪಾದಕರ ವಿರುದ್ಧ ಭಯೋತ್ಪಾದನೆ ನಡೆಸುತ್ತಿದ್ದಾನೆ. ಆತ ಇಸ್ಲಾಂನ್ನು ಅನುಸರಿಸುತ್ತಿದ್ದಾನೆ...'
ಸಂಬಂಧಿತ ಮಾಹಿತಿ ಹುಡುಕಿ