ಪ್ರತ್ಯೇಕವಾದಿ ಹಾಗೂ ಉಗ್ರವಾದಿಗಳಿಗೆ ಅನುಕಂಪ ತೋರುವ ರಾಷ್ಟ್ರಗಳು ಮುಂದೊಂದು ದಿನ ಉಗ್ರರ ಅಟ್ಟಹಾಸಕ್ಕೆ ಸಿಲುಕಬೇಕಾಗುತ್ತದೆ. ಆ ನಿಟ್ಟಿನಲ್ಲಿ ಉಗ್ರರ ಬಗ್ಗೆ ಅನುಕಂಪ ತೋರುವುದು ಬೇಡ ಎಂದು ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ತಿಳಿಸಿದ್ದಾರೆ.
ಎಲ್‌ಟಿಟಿಇ ಸೋಲಿನ ವರ್ಷಾಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತ್ಯೇಕತೆ ಮತ್ತು ಉಗ್ರರ ದಮನ ಮಾಡಿದರೆ ಮಾನವ ಹಕ್ಕು ಸಂಘಟನೆಗಳು ಧ್ವನಿ ಎತ್ತುತ್ತವೆ. ಅವುಗಳ ಬಗ್ಗೆ ಅನುಕಂಪ ತೋರುತ್ತವೆ. ಆದರೆ ಆ ಉಗ್ರವಾದವೇ ಮುಳವಾಗಲಿದೆ ಎಂಬುದನ್ನು ಮನಗಾಣಬೇಕು ಎಂದರು.
ಆ ನಿಟ್ಟಿನಲ್ಲಿ ಯಾವುದೇ ರಾಷ್ಟ್ರ ಭಯೋತ್ಪಾದಕರ ಬಗ್ಗೆ ಅನುಕಂಪ ತೋರಿಸಬಾರದು ಎಂದು ತಾನು ಮನವಿ ಮಾಡಿಕೊಳ್ಳುವುದಾಗಿ ರಾಜಪಕ್ಸೆ ಹೇಳಿದರು.
ಭಯೋತ್ಪಾದನೆಯ ಹೆಚ್ಚಳದ ಪರಿಣಾಮ ಏನು ಎಂಬುದನ್ನು ಇಡೀ ಜಗತ್ತು ಇತಿಹಾಸದಿಂದ ಪಾಠ ಕಲಿಯಬೇಕಾಗಿದೆ ಎಂದರು. ಪ್ರತ್ಯೇಕವಾದ ಮತ್ತು ಉಗ್ರವಾದ ಎರಡೂ ಪ್ರತಿಯೊಂದು ದೇಶಕ್ಕೂ ಅಪಾಯಕಾರಿಯಾದದ್ದು ಎಂದು ವಿವರಿಸಿದರು.