ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಾತುಕತೆಯಲ್ಲಿ ಕಾಶ್ಮೀರ ವಿವಾದ ಕೈಬಿಡಲು ಸಾಧ್ಯವಿಲ್ಲ: ಪಾಕ್ (Nirupama Rao | Kashmir | Pakistan | Bashir | Foreign Ministers' level)
ಮಾತುಕತೆಯಲ್ಲಿ ಕಾಶ್ಮೀರ ವಿವಾದ ಕೈಬಿಡಲು ಸಾಧ್ಯವಿಲ್ಲ: ಪಾಕ್
ಇಸ್ಲಾಮಾಬಾದ್, ಶನಿವಾರ, 19 ಜೂನ್ 2010( 12:43 IST )
ಮುಂಬರುವ ಭಾರತ ಮತ್ತು ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಜೊತೆಗಿನ ಮಾತುಕತೆ ಸಂದರ್ಭದಲ್ಲಿ ಬಾಕಿ ಉಳಿದಿರುವ ಕಾಶ್ಮೀರ ವಿವಾದವನ್ನು ಹೊರತುಪಡಿಸಲು ಸಾಧ್ಯವಿಲ್ಲ ಎಂದು ಪಾಕ್ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಾಶಿರ್ ತಿಳಿಸಿದ್ದಾರೆ.
ಭಾರತ-ಪಾಕ್ ನಡುವಿನ ಕಾರ್ಯದರ್ಶಿಗಳ ಮಟ್ಟದ ಮಾತುಕತೆಗಾಗಿ ನಾವು ಯಾವುದೇ ಪೂರ್ವತಯಾರಿ ಅಜೆಂಡಾ ಇಟ್ಟುಕೊಂಡಿಲ್ಲ. ಯಾವುದನ್ನು ಮಾಡಲು ಸಾಧ್ಯ ಎಂಬುದನ್ನು ಮಾತುಕತೆ ವೇಳೆ ಪರಿಶೀಲಿಸುತ್ತೇವೆ. ನಂತರ ಅದನ್ನು ವಿದೇಶಾಂಗ ಸಚಿವರ ಮಾತುಕತೆ ವೇಳೆ ಪ್ರಸ್ತಾಪಿಸಲಾಗುವುದು ಎಂದರು.
ಜೂನ್ 24ರಂದು ಇಸ್ಲಾಮಾಬಾದ್‌ನಲ್ಲಿ ಭಾರತದ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಮತ್ತು ಪಾಕ್ ವಿದೇಶಾಂಗ ಕಾರ್ಯದರ್ಶಿ ನಡುವೆ ಮಾತುಕತೆ ನಡೆಯಲಿದೆ. ಈ ಮಾತುಕತೆ ಉಭಯ ರಾಷ್ಟ್ರಗಳಿಗೂ ತುಂಬಾ ಸಮಾಧಾನಕರವಾಗಿದ್ದಾಗಿದೆ. ಯಾಕೆಂದರೆ ಇದು ವಿದೇಶಾಂಗ ಸಚಿವರ ಮಟ್ಟದ ಮಾತುಕತೆಗೆ ಸಹಾಯಕವಾಗಲಿದೆ ಎಂದು ಬಾಶಿರ್ ಅಭಿಪ್ರಾಯವ್ಯಕ್ತಪಡಿಸಿದರು.
ಪ್ರಸ್ತಾಪಿತ ಮಾತುಕತೆ ವೇಳೆಯಲ್ಲಿ ಕಾಶ್ಮೀರ ವಿವಾದ ಸೇರಿದಂತೆ ಇನ್ನಿತರ ಪ್ರಮುಖ ವಿಷಯಗಳ ಚರ್ಚೆ ಇಲ್ಲ ಎಂದು ಭಾರತ ಹೇಳಿತ್ತು. ಇದು ಕೇವಲ ಉಭಯ ರಾಷ್ಟ್ರಗಳ ನಡುವಿನ ವಿಶ್ವಾಸಾರ್ಹತೆ ಹೆಚ್ಚಿಸಿಕೊಳ್ಳಲು ನಡೆಸುತ್ತಿರುವ ಚರ್ಚೆ ಎಂದು ತಿಳಿಸಿತ್ತು.