ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಗೃಹಬಂಧನದಲ್ಲಿರುವ ಸೂಕಿಗೆ ಇಂದು 65ನೇ ಹುಟ್ಟುಹಬ್ಬ (Myanmar | Aung San Suu Kyi | military junta | National League for Democracy)
Bookmark and Share Feedback Print
 
ಬರ್ಮಾ ಪ್ರಜಾಪ್ರಭುತ್ವಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿರುವ ಹೋರಾಟಗಾರ್ತಿ ಆಂಗ್ ಸಾನ್ ಸೂಕಿಗೆ ಇಂದು 65ನೇ ಹುಟ್ಟುಹಬ್ಬ. ದುರದೃಷ್ಟವೆಂದರೆ ಅದನ್ನು ಗೃಹಬಂಧನದಲ್ಲೇ ಆಚರಿಸಬೇಕಾಗಿ ಬಂದಿರುವುದು. ಅವರನ್ನು ಬಿಡುಗಡೆ ಮಾಡಬೇಕೆಂದು ವಿಶ್ವದಾದ್ಯಂತ ಇಂದು ಪ್ರತಿಭಟನೆಗಳೂ ನಡೆದಿದ್ದು, ವಿಶ್ವ ನಾಯಕರು ಕೂಡ ದನಿಗೂಡಿಸಿದ್ದಾರೆ.

ಶಾಂತಿ ನೊಬೆಲ್ ಪ್ರಶಸ್ತಿ ವಿಜೇತ ಸ್ವಾತಂತ್ರ್ಯ ಹೋರಾಟಗಾರ್ತಿಯನ್ನು ಇಲ್ಲಿನ ಮಿಲಿಟರಿ ಜುಂಟಾ ಕಳೆದ ಹದಿನೈದು ವರ್ಷಗಳಿಂದ ಬಂಧನದಲ್ಲಿಟ್ಟಿದೆ. ಅಲ್ಲದೆ ಮುಂಬರುವ ಚುನಾವಣೆಗಳಿಂದಲೂ ಅವರನ್ನು ದೂರ ಉಳಿಸಲಾಗಿದೆ.

ಬ್ರಿಟೀಷ್ ಶಿಕ್ಷಣ ತಜ್ಞ ಮೈಕೆಲ್ ಆರಿಸ್‌ರನ್ನು ಮದುವೆಯಾಗಿದ್ದ ಸೂಕಿ, ಗಂಡನನ್ನು 1999ರಲ್ಲಿ ಕಳೆದುಕೊಂಡಿದ್ದಾರೆ. ಪ್ರಸಕ್ತ ಗೃಹಬಂಧನದಲ್ಲಿರುವ ಸೂಕಿಯವರನ್ನು ಬಿಡುಗಡೆ ಮಾಡಬೇಕೆಂದು ಹಲವು ರಾಷ್ಟ್ರಗಳು ಒತ್ತಡ ಹೇರುತ್ತಿವೆ. ಆದರೂ ಇಲ್ಲಿನ ಮಿಲಿಟರಿ ಆಡಳಿತ ಜಗ್ಗುತ್ತಿಲ್ಲ.

ವಿಶ್ವದ ಪ್ರಭಾವಿ ಮಹಿಳೆಯೆಂದು ಗುರುತಿಸಲ್ಪಟ್ಟಿರುವ ಸೂಕಿಯವರು ಬರ್ಮಾದ ಅಧಿಕಾರ ಚುಕ್ಕಾಣಿ ಹಿಡಿಯಬಹುದೆಂಬ ಭೀತಿ ಹಿನ್ನೆಲೆಯಲ್ಲಿ ಅವರನ್ನು ಚುನಾವಣೆಗೆ ಸ್ಫರ್ಧಿಸದಂತೆ ನಿಷೇಧ ಹೇರಲಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಆದರೂ ಸೂಕಿ ಅಭಿಮಾನಿಗಳು ಅವರ ಅನುಪಸ್ಥಿತಿಯಲ್ಲಿ ಹುಟ್ಟುಹಬ್ಬವನ್ನು ಸಣ್ಣ ಪ್ರಮಾಣದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ಮನೆಗಳಲ್ಲೇ ಕೇಕ್ ಕತ್ತರಿಸುವ ಮೂಲಕ ವಿಶಿಷ್ಟವಾಗಿ ಸೂಕಿಗೆ ಗೌರವ ಸೂಚಿಸಲಿದ್ದಾರೆ.

ಸೂಕಿಯವರ ನಾಯಕತ್ವದ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್ಎಲ್‌ಡಿ) ಪಕ್ಷವು ಕೂಡ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಿದೆ. ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರಿಗೆ ಸಿಹಿ-ತಿಂಡಿ, ಹಣ್ಣು-ಹಂಪಲುಗಳನ್ನು ವಿತರಿಸುವ ಮೂಲಕ ಅವರನ್ನು ಗೌರವಿಸಲಿದೆ.
ಸಂಬಂಧಿತ ಮಾಹಿತಿ ಹುಡುಕಿ