ಮಾದಕ ವ್ಯಸನಿಗಳ ಶಿಬಿರದಲ್ಲಿದ್ದ 12 ಯುವಕರಿಗೆ ಮಾಜಿ ಪಾದ್ರಿ ಲೈಂಗಿಕ ಕಿರುಕುಳ ನೀಡಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, 85 ವರ್ಷ ವಯಸ್ಸಿನ ಮಾಜಿ ಪಾದ್ರಿ ಪಿಯರಿನೊ ಗೆಲ್ಮಿನಿ ಆರೋಪಗಳನ್ನು ತಳ್ಳಿಹಾಕಿದ್ದು, ತಾವು ಎರಡು ವರ್ಷಗಳ ಹಿಂದೆ ಪಾದ್ರಿ ಹುದ್ದೆಯನ್ನು ತೊರದಿರುವುದಾಗಿ ಹೇಳಿಕೆ ನೀಡಿದ್ದಾರೆ.
ಗೆಲ್ಮಿನಿ,ಇಟಲಿಯಲ್ಲಿ ಪ್ರಮುಖ ಪಾದ್ರಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದು, 2007ರಲ್ಲಿ ಲೈಂಗಿಕ ಆರೋಪ ಬಂದ ನಂತರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಹೊರಬಂದಿದ್ದರು.
ಅಮೆಲಿಯಾ ನಗರದ ಉಂಬ್ರೆನ್ ಪಟ್ಟಣದಲ್ಲಿರುವ ಮಾದಕ ವ್ಯಸನಿಗಳ ಶಿಬಿರದಲ್ಲಿರುವಾಗ ತಮಗೆ ಪಾದ್ರಿ ಲೈಂಗಿಕ್ ಕಿರುಕುಳ ನೀಡಿದ್ದಾರೆ ಎಂದು ಒಂಬತ್ತು ಮಂದಿ ಹೇಳಿಕೆ ನೀಡಿದ್ದಾರೆ. ಆದರೆ ಇದೀಗ ಪಾದ್ರಿ ವಿರುದ್ಧ ಹೇಳಿಕೆ ನೀಡುವವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.