ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇರಾಕ್::ಅಮೆರಿಕೆಗೆ ನೆರವು ನೀಡಿದ ತಂದೆಯನ್ನು ಕೊಂದ ಮಗ (:Iraq|Al Qaida|US military|Abdul Halim Hameed|Hameed al Daraji)
Bookmark and Share Feedback Print
 
ಅಮೆರಿಕ ಸೇನಾಪಡೆಗೆ ಅನುವಾದಕನಾಗಿ ಕಾರ್ಯನಿರ್ವಹಿಸುತ್ತಿದ್ದ ತಂದೆಯನ್ನು ಅಲ್‌ಕೈದಾ ಬೆಂಬಲಿತ ಮಗನೆ ಗುಂಡಿಕ್ಕಿ ಕೊಂದ ಧಟನೆ ವರದಿಯಾಗಿದೆ.

50 ವರ್ಷ ವಯಸ್ಸಿನ ಹಮೀದ್ ಅಲ್-ದರಾಜಿ, ಅಮೆರಿಕದ ನ್ಯಾಟೊ ಪಡೆಗಳು ಇರಾಕ್‌ ಮೇಲೆ ದಾಳಿ ಮಾಡಿ ಸದ್ದಾಂನನ್ನು ವಶಕ್ಕೆ ತೆಗೆದುಕೊಂಡ ನಂತರ ಸುಮಾರು ಏಳು ವರ್ಷಗಳಿಂದ ಗುತ್ತಿಗೆದಾರನಾಗಿ ಹಾಗೂ ಅನುವಾದಕನಾಗಿ ಸೇವೆ ಸಲ್ಲಿಸುತ್ತಿದ್ದ.ಅಮೆರಿಕ ಸೇನಾಪಡೆಗಳಿಂದ ದೂರವಿರುವಂತೆ ಮಗನು ತಂದೆಯ ಮೇಲೆ ಒತ್ತಡ ಹೇರುತ್ತಿದ್ದ. ಆದರೆ ತಂದೆ ತಿರಸ್ಕರಿಸಿದ್ದರಿಂದ ಮಲಗಿರುವಾಗ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಮುಖ್ಯಸ್ಥ ಲೆಫ್ಟಿನೆಂಟ್ ಎಮಾದ್ ಮುಹಸಿನ್ ಹೇಳಿದ್ದಾರೆ.

ಹತ್ಯೆಗದ ಮಗ ಹಾಗೂ ಆತನ ಚಿಕ್ಕಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ದಾಳಿಯಲ್ಲಿ ಪಾಲ್ಗೊಂಡ ಮತ್ತೊಬ್ಬ ಮಗನನ್ನು ಬಂಧಿಸಲು ಪೊಲೀಸರು ಜಾಲ ಬೀಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹತ್ಯೆಗದ ಆರೋಪಿ ಅಬ್ದುಲ್ -ಹಾಲಿಮ್ ಹಮೀದ್, ಜಾಗತಿಕ ಉಗ್ರಗಾಮಿ ಸಂಘಟನೆಯಾದ ಅಲ್‌ಕೈದಾ ಪರ ಕಾಪ್ಯನಿರ್ವಹಿಸುತ್ತಿದ್ದನು. ಆದರೆ 2007ರ ಅವಧಿಯ ನಂತರ ಉಗ್ರಗಾಮಿ ಚಟುವಟಿಕೆಗಳಿಂದ ದೂರವಾಗಿದ್ದನು. ಆದರೆ ಆತನ ಅಳಿಯ ಹಾಗೂ 24ವರ್ಷ ವಯಸ್ಸಿನ ಸಹೋದರ ಅಲ್‌ಕೈದಾ ಸಂಘಟನೆಗಾಗಿ ಅಮೆರಿಕ ಸೇನಾಪಡೆಗಳ ವಿರುದ್ಧ ಹೋರಾಟ ಮುಂದುವರಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ