ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇರಾನ್ ಜೊತೆ ಒಪ್ಪಂದ ಸರಿಯಲ್ಲ: ಪಾಕ್‌ಗೆ ಅಮೆರಿಕ (Pakistan | Iran gas deal | US | Afghanistan | Richard Holbrooke)
Bookmark and Share Feedback Print
 
ಇರಾನ್ ವಿರುದ್ಧ ಇತ್ತೀಚೆಗಷ್ಟೇ ಅಮೆರಿಕ ಕಾಂಗ್ರೆಸ್ ಹೊಸ ನಿರ್ಬಂಧ ಹೇರಿದ್ದ ಬೆನ್ನಲ್ಲೇ ಪಾಕಿಸ್ತಾನ ಇರಾನ್ ಜೊತೆ ಗ್ಯಾಸ್ ಪೈಪ್ ಲೈನ್ ಒಪ್ಪಂದ ಮಾಡಿಕೊಂಡಿರುವುದು ಸರಿಯಲ್ಲ ಎಂದು ಪಾಕ್ ಮತ್ತು ಅಫ್ಘಾನಿಸ್ತಾನದ ಅಮೆರಿಕದ ವಿಶೇಷ ರಾಯಭಾರಿ ಭಾನುವಾರ ಎಚ್ಚರಿಸಿದ್ದಾರೆ.

ಜೂನ್ ಮೊದಲ ವಾರದಲ್ಲಿ ಇರಾನ್ ಪಾಕಿಸ್ತಾನಕ್ಕೆ 21.5ಮಿಲಿಯನ್ ಕ್ಯೂಬಿಕ್ ಮೀಟರ್ ಗ್ಯಾಸ್ ಅನ್ನು ಪ್ರತಿದಿನ ರಫ್ತು ಮಾಡುವ ಒಪ್ಪಂದಕ್ಕೆ ಸಹಿ ಹಾಕಿದೆ. ಆ ನಿಟ್ಟಿನಲ್ಲಿ ಇರಾನ್ ಜೊತೆ ಯಾವುದೇ ಒಪ್ಪಂದ ಮಾಡಿಕೊಳ್ಳದಂತೆ ಪಾಕ್‌ಗೆ ಸೂಚನೆ ನೀಡಲಾಗಿತ್ತು. ಅಲ್ಲದೇ ಅಮೆರಿಕದ ಕಾಂಗ್ರೆಸ್‌ ಇರಾನ್ ಮೇಲೆ ಹೊಸ ನಿರ್ಬಂಧ ಹೇರುವ ಮುನ್ನವೇ ಒಪ್ಪಂದ ಮಾಡಿಕೊಂಡಿರುವುದು ಸರಿಯಲ್ಲ ೆಂದು ರಿಚರ್ಡ್ ಹಾಲ್‌ಬ್ರೂಕ್ ತಿಳಿಸಿದ್ದಾರೆ.

ಅಮೆರಿಕ, ವಿಶ್ವಸಂಸ್ಥೆಯ ಎಚ್ಚರಿಕೆಯನ್ನೂ ಲೆಕ್ಕಿಸದೇ, ಇರಾನ್ ಪರಮಾಣು ಸಂಬಂಧಿ ಕಾರ್ಯವನ್ನು ಮುಂದುವರಿಸಿದೆ. ಹಾಗಾಗಿ ವಿಶ್ವಸಂಸ್ಥೆ, ಅಮೆರಿಕ ಇರಾನ್ ಮೇಲೆ ಹೊಸ ನಿರ್ಬಂಧ ಹೇರಿದೆ. ಆ ರೀತಿ ನಿಷೇಧ ಹೇರಿದ ನಂತರವೂ ಪಾಕಿಸ್ತಾನ ಗ್ಯಾಸ್ ಪೈಪ್ ಲೈನ್ ಒಪ್ಪಂದ ಮಾಡಿಕೊಂಡಿರುವುದು ಕಾನೂನಿನ್ವಯ ತಪ್ಪಾಗುತ್ತದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ