ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ದೇಹ ತೂಕ ಕಡಿಮೆ ಮಾಡಿಕೊಳ್ಳಿ: ಟೀನ್‌ಗಳಿಗೆ ಸೂಚನೆ (UAE | no to obesity | anti-obesity | health education)
Bookmark and Share Feedback Print
 
90 ಕೇಜಿಯನ್ನೂ ಮೀರಿಸುವ ಹದಿ ಹರೆಯದ ಹುಡುಗ-ಹುಡುಗಿಯರು ತಮ್ಮ ದೇಹದ ತೂಕವನ್ನು ತಗ್ಗಿಸಲು ಬೊಜ್ಜು ಕರಗಿಸುವ ಶಿಬಿರಗಳಿಗೆ ಹಾಜರಾಗುವ ಮೂಲಕ ತೆಳ್ಳಗಾಗಲು ಯತ್ನಿಸಬೇಕು ಎಂದು ಅರಬ್ ಸಂಯುಕ್ತ ಸಂಸ್ಥಾನ ಸರಕಾರ ಸೂಚನೆ ನೀಡಿದೆ.

ಯುಎಇಯ ಆರೋಗ್ಯ ಸಚಿವಾಲಯದ ಆರೋಗ್ಯ ಶಿಕ್ಷಣ ಮತ್ತು ಪ್ರಚಾರ ಇಲಾಖೆಯು 'ಸ್ಥೂಲಕಾಯ ಬೇಡ' ಎಂಬ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಇದರಲ್ಲಿ ಆರೋಗ್ಯ ಜಾಗೃತಿ ಸಲಹೆಗಳು ಮತ್ತು ದೈಹಿಕ ತರಬೇತಿ ಶಿಬಿರಗಳೂ ಒಳಗೊಂಡಿವೆ.

ಇಡೀ ದಿನ ಯಾವ ರೀತಿಯ ಆಹಾರಗಳನ್ನು ತಿಂದರೆ ಆರೋಗ್ಯಕ್ಕೆ ಉತ್ತಮ ಮತ್ತು ಅದಕ್ಕೆ ಹೊಂದಿಕೊಳ್ಳುವುದು ಹೇಗೆ ಸೇರಿದಂತೆ ಹಲವು ವಿಚಾರಗಳನ್ನು ಇಲ್ಲಿ ಹೇಳಿ ಕೊಡಲಾಗುತ್ತದೆ.

15ರಿಂದ 18ರ ಹರೆಯದ ನಡುವಿನ 90ರಿಂದ 145 ಕೇಜಿ ತೂಗುವ 20 ವಿದ್ಯಾರ್ಥಿಗಳು ತರಬೇತಿಯ ಪ್ರಾಥಮಿಕ ಹಂತದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಆರೋಗ್ಯ ಶಿಕ್ಷಣ ಮತ್ತು ಪ್ರಚಾರ ಇಲಾಖೆಯ ನಿರ್ದೇಶಕ ಮೇಸೂನ್ ಅಲ್ ಶೇರ್ ತಿಳಿಸಿದ್ದಾರೆ.

ಶಿಬಿರದಲ್ಲಿ ಪಾಲ್ಗೊಳ್ಳುವವರು ಪ್ರತಿ ವಾರ ಕನಿಷ್ಠ ಒಂದು ಕೇಜಿ ತೂಕ ಇಳಿಸುವಂತಾಗಬೇಕು ಎನ್ನುವುದು ಕಾರ್ಯಕ್ರಮದ ಉದ್ದೇಶ. ಪ್ರತಿ ಬಾರಿಯ ದೈಹಿಕ ತರಬೇತಿಯು ಮಧ್ಯಾಹ್ನದ ಊಟಕ್ಕೂ ಮೊದಲು ನಡೆಸಲಾಗುತ್ತದೆ. ಆ ಮೂಲಕ ನಿಖರ ಫಲಿತಾಂಶ ಪಡೆಯುವುದು ನಮ್ಮ ಗುರಿ ಎಂದು ಅವರು ವಿವರಣೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಯುಎಇ, ಬೊಜ್ಜು, ಆರೋಗ್ಯ ಶಿಕ್ಷಣ