ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕ: ಉಗ್ರರಿಗೆ ಬೆಂಬಲ-ಭಾರತೀಯರಿಬ್ಬರಿಗೆ ಜೈಲುಶಿಕ್ಷೆ (US terrorism | India-born | Illinois | Zubair Ahmed | sentenced)
Bookmark and Share Feedback Print
 
ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಅಮೆರಿಕ ಮಿಲಿಟರಿ ಪಡೆಯನ್ನು ಕೊಲ್ಲುವ ಸಂಚು ರೂಪಿಸಿದ ಆರೋಪದ ಮೇಲೆ ಭಾರತ ಸಂಜಾತ ಪ್ರಜೆ ಸೇರಿದಂತೆ ಇಲ್ಲಿನಾಯ್ಸ್‌ನ ಇಬ್ಬರು ಸಹೋದರರಿಗೆ ಅಮೆರಿಕ ನ್ಯಾಯಾಲಯ ಜೈಲುಶಿಕ್ಷೆ ವಿಧಿಸಿದೆ.

ಜುಬೈರ್ ಅಹ್ಮದ್ (31)ಗೆ ಹತ್ತು ವರ್ಷ ಹಾಗೂ ಖಲೀಲ್ ಅಹ್ಮದ್ (29)ಗೆ ಎಂಟು ವರ್ಷ ನಾಲ್ಕು ತಿಂಗಳ ಕಾಲ ಜೈಲುಶಿಕ್ಷೆ ವಿಧಿಸಿರುವುದಾಗಿ ಉತ್ತರ ಪ್ರಾಂತ್ಯದ ಅಮೆರಿಕದ ಅಟಾರ್ನಿ ಓಹಿಯೋ ಸ್ಟೀವನ್ ಡೆಟ್ಟೆಲ್‌ಬಾಚ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಭಯೋತ್ಪಾದಕರಿಗೆ ಶಸ್ತ್ರಾಸ್ತ್ರದ ನೆರವು ನೀಡಿರುವ ಬಗ್ಗೆ ಅಮೆರಿಕದ ಜಿಲ್ಲಾ ನ್ಯಾಯಾಧೀಶ ಜೇಮ್ಸ್ ಕಾರ್ರ್ ಅವರು ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲಿ ಅಹ್ಮದ್ ತಪ್ಪೊಪ್ಪಿಕೊಂಡಿದ್ದ. ಅಲ್ಲದೇ ಆರೋಪಿಗಳಿಗೆ ನೂರು ಅಮೆರಿಕನ್ ಡಾಲರ್ ದಂಡ ಪಾವತಿಸುವಂತೆ ಆದೇಶ ನೀಡಿದ್ದಾರೆ.

ಅಮೆರಿಕದ ಮಿಲಿಟರಿ ಪಡೆ ವಿರುದ್ಧ ಜಿಹಾದ್ ನಡೆಸಲು ಇಬ್ಬರೂ ದೀರ್ಘಕಾಲದಿಂದ ಸಂಚು ರೂಪಿಸಿರುವುದಾಗಿ ಅಮೆರಿಕದ ಅಟಾರ್ನಿ ಜಸ್ಟಿನ್ ಹೆರ್ಡ್‌ಮನ್ ತಿಳಿಸಿದ್ದಾರೆ. ಜುಬೈರ್ ಭಯೋತ್ಪಾದನಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ. ಖಲೀಲ್ ಅಮೆರಿಕದ ಪ್ರಜೆಯಾಗಿದ್ದು, ಆತ ಭಾರತದಲ್ಲಿ ಜನಿಸಿದ್ದ. ಸಹೋದರ ಜುಬೈರ್ ಅಮೆರಿಕದ ಚಿಕಾಗೋದಲ್ಲಿ ಜನಿಸಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ