ಪಂಜಾಬ್‌ನ ದಕ್ಷಿಣ ಪಾಂತ್ಯದಲ್ಲಿ ಪಾಕಿಸ್ತಾನ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಲಷ್ಕರ್, ಜೈಷ್ ಸೇರಿದಂತೆ ನಿಷೇಧಿತ ಧಾರ್ಮಿಕ ಮತ್ತು ಉಗ್ರಗಾಮಿ ಸಂಘಟನೆಯ 90 ಮಂದಿಯನ್ನು ಸೆರೆ ಹಿಡಿದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಾಂತ್ಯದಲ್ಲಿ ಕಾರ್ಯಾಚರಿಸುತ್ತಿರುವ ನಿಷೇಧಿತ ಉಗ್ರಗಾಮಿ ಸಂಘಟನೆ ವಿರುದ್ಧ ಭಾರೀ ಪ್ರಮಾಣದ ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರರನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸ್ ವರಿಷ್ಠಾಧಿಕಾರಿ ತಾರಿಖ್ ಸಲೇಂ ಡೋಗಾರ್ ವಿವರಿಸಿದ್ದಾರೆ.
ನಿಷೇಧಿತ ಲಷ್ಕರ್ ಇ ತೊಯ್ಬಾ, ಜೈಷ್ ಇ ಮೊಹಮ್ಮದ್, ತೆಹ್ರೀಕ್ ಇ ತಾಲಿಬಾನ್, ಲಷ್ಕರ್ ಇ ಜಾಂಘ್ವಿ ಮತ್ತು ಸಿಫಾ ಇ ಸಾಹಾಬಾ ವಿರುದ್ಧ ಕಾರ್ಯಾಚರಣೆ ನಡೆಸಲಾಗಿತ್ತು. ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವ ಮತ್ತು ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಸೇರಿಸಿರುವ ಹಲವು ವ್ಯಕ್ತಿಗಳನ್ನು ಬಂಧಿಸಿರುವುದಾಗಿ ಡೋಗ್ರಾ ಹೇಳಿದರು.
ಅಲ್ಲದೇ, ಅಫ್ಘಾನಿಸ್ತಾನದಲ್ಲಿ ತರಬೇತಿ ಪಡೆದಿರುವ ಯುವಕರು, ಅಫ್ಘಾನ್‌ನಿಂದ ವಾಪಸಾದ ಕೈದಿಗಳು, ಲಾಲ್ ಮಸೀದಿ ದಾಳಿಯ ಪ್ರಮುಖರನ್ನು ಸೆರೆ ಹಿಡಿಯಲು ಬಲೆ ಬೀಸಲಾಗಿದೆ ಎಂದರು.