ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಲಿಬಾನ್ ಹೊಸ ತಂತ್ರ: ಮಂಗಗಳಿಗೆ ಜಿಹಾದ್ ತರಬೇತಿ! (Apes trained | Jihad | Afghanistan | America | Taliban)
Bookmark and Share Feedback Print
 
PR
'ಎಲ್ಲ ಬಿಟ್ಟು ಭಂಗಿ ನೆಟ್ಟ' ಎಂಬ ಗಾದೆ ಮಾತಿನಂತೆ ಎಕೆ 47, ಆತ್ಮಹತ್ಯಾ ದಾಳಿಯ ತಂತ್ರ ನಡೆಸುತ್ತಿದ್ದ ತಾಲಿಬಾನ್ ಉಗ್ರರು ಇದೀಗ ಹೊಸದೊಂದು ಆಯುಧವೊಂದನ್ನು ಪತ್ತೆ ಹಚ್ಚಿದ್ದಾರೆ. ಅದೇನಂದರೆ ಅಮೆರಿಕ ಮಿಲಿಟರಿ ಪಡೆ ವಿರುದ್ಧ ಮಂಗಗಳಿಗೆ ತರಬೇತಿ ನೀಡಿ ಜಿಹಾದ್ ನಡೆಸಲು ತಾಲಿಬಾನಿಗಳು ನಿರ್ಧರಿಸಿದ್ದಾರೆ!

'ಅಮೆರಿಕದ ಮಿಲಿಟರಿ ಪಡೆ ವಿರುದ್ಧ ಮಂಗಗಳನ್ನು ಆಯುಧವನ್ನಾಗಿ ಬಳಸಿಕೊಂಡು ದಾಳಿ ನಡೆಸಲು ಅಘ್ಘಾನಿಸ್ತಾನದಲ್ಲಿನ ತಾಲಿಬಾನ್ ಪಡೆಗಳು ತರಬೇತಿ ನೀಡುತ್ತಿರುವುದಾಗಿ' ಚೀನಾದ ಪೀಪಲ್ಸ್ ಡೈಲಿ ವರದಿ ತಿಳಿಸಿದೆ.

ಇಸ್ಲಾಮಿಕ್ ಉಗ್ರರು ಇದೀಗ ಹೊಸ ರಹಸ್ಯ ಆಯುಧವೊಂದನ್ನು ಸಂಶೋಧಿಸಿದ್ದು, ಆ ನಿಟ್ಟಿನಲ್ಲಿ ದೊಡ್ಡ ಗಾತ್ರದ ಕಪಿಗಳನ್ನು ಅಮೆರಿಕ ಮಿಲಿಟರಿ ಪಡೆ ವಿರುದ್ಧ ಆಯುಧವಾಗಿ ಬಳಸಲು ರೂಪುರೇಶೆ ಸಿದ್ದಪಡಿಸಿರುವುದಾಗಿ ವರದಿ ವಿವರಿಸಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಗಡಿಭಾಗದ ವಜಿರಿಸ್ತಾನ್ ಬುಡಕಟ್ಟು ಪ್ರದೇಶದಲ್ಲಿ ತಾಲಿಬಾನ್ ಪಡೆಗಳು ಎಕೆ-47, ಮೆಷಿನ್ ಗನ್‌ಗಳ ಮೂಲಕ ಭಯೋತ್ಪಾದನಾ ಕೃತ್ಯ ನಡೆಸುತ್ತಿವೆ.

ಆದರೆ ಈಗ ಬಾಳೆಹಣ್ಣು ಮತ್ತು ನೆಲಗಡಲೆ ಆಮಿಷವೊಡ್ಡಿ ಮಂಗಗಳನ್ನು ಸೆರೆ ಹಿಡಿದು ತಾಲಿಬಾನ್ ಉಗ್ರರು ಅವುಗಳಿಗೆ ತರಬೇತಿ ನೀಡುತ್ತಿರುವುದಾಗಿ ವರದಿ ತಿಳಿಸಿದೆ.

ಏತನ್ಮಧ್ಯೆ, ಮಂಗಗಳಿಗೆ ತರಬೇತಿ ನೀಡಿ ಜಿಹಾದ್ ಮುಂದುವರಿಸಲು ಉದ್ದೇಶಿಸಿರುವ ಬಗ್ಗೆ ಅಮೆರಿಕದ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ತಾಲಿಬಾನ್ ಉಗ್ರರು ಭಾರೀ ಪ್ರಮಾಣದಲ್ಲಿ ಅನಾಹುತ ಅನುಭವಿಸಿದ ನಂತರ, ಈಗ ಮಂಗಗಳಿಗೆ ತರಬೇತಿ ಕೊಡುವ ಕೆಲಸಕ್ಕೆ ಮುಂದಾಗಿದ್ದಾರೆ. ಆದರೆ ತಾಲಿಬಾನಿಗಳ ಈ ತಂತ್ರವೂ ಫಲಕಾರಿಯಾಗುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

1955ರಲ್ಲಿ ಅಮೆರಿಕದ ಸಿಐಎ ವಿಯೆಟ್ನಾಂ ವಿರುದ್ಧ ಸಮರ ಸಾರಿದ್ದ ಸಂದರ್ಭದಲ್ಲಿ ಕಪಿ ಸೈನಿಕರನ್ನು ಉಪಯೋಗಿಸಿರುವುದಾಗಿ ಪೀಪಲ್ಸ್ ದೈನಿಕ ಉದಾಹರಣೆ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ