ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮೆಕ್ಸಿಕೋ: ಹೊಟ್ಟೆಪಾಡಿಗಾಗಿ 3 ಮಿ.ಮಕ್ಕಳು ದುಡಿಯುತ್ತಿದ್ದಾರಂತೆ! (Mexico | children work | Three million children | Ministry of Labour)
ದೇಶದಲ್ಲಿ 5ರಿಂದ 17 ವರ್ಷದೊಳಗಿನ ಸುಮಾರು ಮೂರು ಮಿಲಿಯನ್ ಮಕ್ಕಳು ಹಣ ಸಂಪಾದನೆಗಾಗಿ ದುಡಿಯುತ್ತಿದ್ದಾರೆಂದು ಮೆಕ್ಸಿಕೋದ ಕಾರ್ಮಿಕ ಸಚಿವಾಲಯ ಬುಧವಾರ ತಿಳಿಸಿದೆ.
2007-2009ರ ಅಂಕಿ ಅಂಶದ ಪ್ರಕಾರ ದೇಶದಲ್ಲಿ ದುಡಿಯುವ ಮಕ್ಕಳ ಸಂಖ್ಯೆ ಶೇ.17.3ರಷ್ಟು ಏರಿಕೆಯಾಗಿದ್ದು, ಸುಮಾರು 3.6ಮಿಲಿಯನ್ ಮಕ್ಕಳು ಆರ್ಥಿಕ ಸಂಪಾದನೆಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಸ್ಟಾಟಿಟಿಕ್ಸ್ ಮತ್ತು ಜಿಯೋಗ್ರಾಫಿ ಹಾಗೂ ಲೇಬರ್ ಸಚಿವಾಲಯ ನಡೆಸಿದ ಸಮೀಕ್ಷೆಯಲ್ಲಿ ಈ ವಿವರ ಬೆಳಕಿಗೆ ಬಂದಿದೆ.
2007ರಲ್ಲಿ ದುಡಿಯುವ ಮಕ್ಕಳ ಸಂಖ್ಯೆ 12.5ರಷ್ಟಿದ್ದರೆ, 2009ರಲ್ಲಿ ಶೇ.10.7ಕ್ಕೆ ಇಳಿದಿತ್ತು. ಆದರೆ ಅದರಲ್ಲಿ ಯುವಕರ ಅನುಪಾತ ಶೇ.16.6ರಿಂದ ಶೇ.14.1ಕ್ಕೆ ಇಳಿದಿದ್ದರೆ, ಯುವತಿಯ ಸಂಖ್ಯೆ ಶೇ.8.3ರಿಂದ 7.2ಕ್ಕೆ ಇಳಿಕೆ ಕಂಡಿರುವುದಾಗಿ ಸರಕಾರಿ ಏಜೆನ್ಸಿ ವಿವರಿಸಿದೆ.
ಆದರೆ ಒಟ್ಟಾರೆ ದೇಶದಲ್ಲಿ ದುಡಿಯುವ ಮಕ್ಕಳ ಸಂಖ್ಯೆ ಶೇ.17.6ಕ್ಕೆ ತಲುಪಿದೆ. ಉತ್ತರ ಮೆಕ್ಸಿಕೋದಲ್ಲಿ ಅತಿ ಕಡಿಮೆ ಅಂದರೆ ಶೇ.3.4ರಷ್ಟು ಇದ್ದಿರುವುದಾಗಿ ಅಂಕಿ-ಅಂಶ ತಿಳಿಸಿದೆ.
2009ರಲ್ಲಿ ಐದು ವರ್ಷದಿಂದ 17ವರ್ಷದೊಳಗಿನ 28.2ಮಿಲಿಯನ್ ಮಕ್ಕಳು ದುಡಿಯುತ್ತಿದ್ದರು. ಇದು ದೇಶದ ಒಟ್ಟು ಜನಸಂಖ್ಯೆಯ ಶೇ.26.2ರಷ್ಟು ಆಗಿರುವುದಾಗಿ ಐಎನ್ಇಜಿಐ ಹೇಳಿದೆ. ಈ ವಯಸ್ಸಿನ ಶೇ.90.5ರಷ್ಟು ಮಕ್ಕಳು ಶಾಲೆಗೆ ಹೋಗುತ್ತಾರೆ. ಆದರೆ ಮನೆಯಲ್ಲಿನ ಆರ್ಥಿಕ ಪರಿಸ್ಥಿತಿ ಮತ್ತು ಆಸಕ್ತಿ ಕಳೆದುಕೊಳ್ಳುವ ಮಕ್ಕಳು ಈ ರೀತಿಯಾಗಿ ದುಡಿಯಲು ಮುಂದಾಗುತ್ತಿದ್ದಾರೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.