ಹತ್ಯೆ ಪ್ರಕರಣವೊಂದರಲ್ಲಿ 20 ವರ್ಷಗಳ ಜೈಲು ಶಿಕ್ಷೆಗೊಳಗಾಗಿರುವ ಚಾರ್ಲ್ಸ್ ಶೋಭರಾಜ್ ಹಣೆಬರಹ ನಿರ್ಧಾರ ಮತ್ತೆ ಮುಂದಕ್ಕೆ ಹೋಗಿದೆ. ಕಳೆದ ಏಳು ವರ್ಷಗಳಿಂದ ನಡೆಯುತ್ತಿರುವ ಈ ಹೋರಾಟದ ಅಂತಿಮ ತೀರ್ಪನ್ನು ನೇಪಾಳದ ಸುಪ್ರೀಂ ಕೋರ್ಟ್ ಇಂದು ನೀಡಬೇಕಾಗಿತ್ತು.
ಪ್ರಾಸಿಕ್ಯೂಷನ್ ಮತ್ತು ಶೋಭರಾಜ್ ವಕೀಲರ ವಾದ-ಪ್ರತಿವಾದಗಳನ್ನು ಪರಿಶೀಲನೆ ನಡೆಸಲು ನಮಗೆ ಸಿಕ್ಕ ಅವಧಿಯಲ್ಲಿ ಸಾಧ್ಯವಾಗದೇ ಇದ್ದ ಕಾರಣ ತೀರ್ಪನ್ನು ಮುಂದಕ್ಕೆ ಹಾಕಲಾಗಿದೆ ಎಂದು ಪ್ರಕರಣದ ವಿಚಾರಣೆ ನಡೆಸಿದ್ದ ಇಬ್ಬರು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ಉಭಯ ಬಣಗಳು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲನೆ ನಡೆಸಲು ಮತ್ತಷ್ಟು ಸಮಯ ಬೇಕಾಗಿದೆ ಎಂದು ನ್ಯಾಯಮೂರ್ತಿ ರಾಮ್ ಪ್ರಸಾದ್ ಶಾಹ್ ವಿವರಣೆ ನೀಡಿದ್ದಾರೆ.
1975ರಲ್ಲಿ ಅಮೆರಿಕನ್ ಪ್ರವಾಸಿ ಕೋನಿ ಜೋ ಬ್ರೊಂಜಿಚ್ ಅವರನ್ನು ಹತ್ಯೆಗೈದ ಪ್ರಕರಣದ ಅಂತಿಮ ತೀರ್ಪನ್ನು ಸುಪ್ರೀಂ ಕೋರ್ಟ್ ಮುಂದೂಡುತ್ತಿರುವುದು ಇದು ಮೂರನೇ ಬಾರಿ.