ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶಾಂತಿಯುತ ಪರಿಸ್ಥಿತಿ ನೆಲೆಸಲಿ: ಪಾಕಿಸ್ತಾನಕ್ಕೆ ಕೃಷ್ಣ (S M Krishna | Pakistan | Shah Mehmood Qureshi | India)
Bookmark and Share Feedback Print
 
ಮೂರು ದಿನಗಳ ಪ್ರವಾಸಕ್ಕಾಗಿ ಪಾಕಿಸ್ತಾನಕ್ಕೆ ಆಗಮಿಸಿರುವ ಭಾರತದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ, ಇಸ್ಲಾಮಾಬಾದ್ ಶಾಂತಿಯುತ ಮತ್ತು ಸ್ಥಿರ ವಾತಾವರಣವನ್ನು ಶೀಘ್ರದಲ್ಲೇ ಕಾಣುವಂತಾಗಲಿ ಎಂದು ಹಾರೈಸಿದ್ದಾರೆ.

ಪಾಕಿಸ್ತಾನದ ಜನತೆಗೆ ಶುಭವಾಗಲಿ ಎಂಬ ಭಾರತದ ಪ್ರಜೆಗಳ ಹೃತ್ಪೂರ್ವಕ ಹಾರೈಕೆಗಳನ್ನು ನಾನು ನನ್ನ ಜತೆಗೆ ತಂದಿದ್ದೇನೆ. ಪಾಕಿಸ್ತಾನವು ಶಾಂತಿಯುತ, ಸಮೃದ್ಧ ಮತ್ತು ಸ್ಥಿರತೆಯನ್ನು ಕಾಣಲಿ ಎಂದು ಇಸ್ಲಾಮಾಬಾದ್ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ತಿಳಿಸಿದರು.

ತನ್ನ ಪ್ರವಾಸದ ಸಂದರ್ಭದಲ್ಲಿ ಪಾಕ್ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿ ಸೇರಿದಂತೆ ಇತರ ನಾಯಕರನ್ನು ಭೇಟಿ ಮಾಡಲಿರುವ ಕೃಷ್ಣ, ತಾವು ಪರಸ್ಪರ ಸಂಬಂಧಪಟ್ಟ ಎಲ್ಲಾ ವಿಚಾರಗಳನ್ನೂ ಚರ್ಚೆ ನಡೆಸಲಿದ್ದೇವೆ ಎಂದಿದ್ದಾರೆ.

ಜೂನ್ ತಿಂಗಳಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ಪಿ. ಚಿದಂಬರಂ ಅವರು ಸಮಾಲೋಚನೆ ಸಂದರ್ಭದಲ್ಲಿ ಮಾಡಿದ್ದ ಪ್ರಸ್ತಾಪಗಳು ಮತ್ತು ಅಮೆರಿಕಾ ಸಂಜಾತ ಶಂಕಿತ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿ ವಿಚಾರಣೆ ಸಂದರ್ಭದಲ್ಲಿ ಬಹಿರಂಗಪಡಿಸಿರುವ ಅಂಶಗಳ ಕುರಿತು ಮಾತುಕತೆ ನಡೆಸಲು ತಾನು ಯೋಚಿಸಿದ್ದೇನೆ ಎಂದು ಕೃಷ್ಣ ತಿಳಿಸಿದ್ದಾರೆ.

ಭಾರತವು ಪರಸ್ಪರ ನಂಬಿಕೆ ಮತ್ತು ವಿಶ್ವಾಸಗಳ ನೆಲೆಯಲ್ಲಿ ಪಾಕಿಸ್ತಾನಕ್ಕೆ ಸಂಬಂಧಪಟ್ಟ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಬದ್ಧವಾಗಿದೆ ಎಂದೂ ಅವರು ಹೇಳಿದ್ದಾರೆ.

2008ರ ಮುಂಬೈ ದಾಳಿ ಬಳಿಕ ಎರಡು ದೇಶಗಳ ನಡುವೆ ಸ್ಥಗಿತಗೊಂಡಿದ್ದ ಅಧಿಕೃತ ಮಾತುಕತೆಗಳಿಗೆ ಈ ಮೂಲಕ ಚಾಲನೆ ದೊರೆತಿದ್ದು, ಸಚಿವರ ಜತೆ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಇಸ್ಲಾಮಾಬಾದ್ ತಲುಪಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ