ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 26/11 ಮ್ಯಾಜಿಸ್ಟ್ರೇಟ್, ಅಧಿಕಾರಿಯನ್ನು ಕಳುಹಿಸಿ: ಭಾರತಕ್ಕೆ ಪಾಕ್ (Pakistan | India | Ajmal Kasab | 26/11 attacks | FIR | Rehman Malik)
Bookmark and Share Feedback Print
 
ಮುಂಬೈ ದಾಳಿ ಪ್ರಕರಣದಲ್ಲಿ ಸೆರೆಸಿಕ್ಕಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಅಮಿರ್ ಅಜ್ಮಲ್ ಕಸಬ್‌ನ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸ್ ಅಧಿಕಾರಿ ಮತ್ತು ಮ್ಯಾಜಿಸ್ಟ್ರೇಟ್ ಅನ್ನು ಪಾಕಿಸ್ತಾನಕ್ಕೆ ಕಳುಹಿಸಿ ಕೊಡುವಂತೆ ಭಾರತ ಸರಕಾರವನ್ನು ಕೋರಿದೆ.

ಕಳೆದ ರಾತ್ರಿ ಪಾಕಿಸ್ತಾನದ ಆಂತರಿಕ ಸಚಿವ ರೆಹಮಾನ್ ಮಲಿಕ್ ಮತ್ತು ಭಾರತದ ರಾಯಭಾರಿ ಶರತ್ ಸಭಾರವಾಲ್ ಅವರು ಮಾತುಕತೆ ನಡೆಸಿದ ವೇಳೆ ಈ ಮನವಿ ಮಾಡಿಕೊಳ್ಳಲಾಗಿದೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.

ಮಾತುಕತೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಲಿಕ್, ಭಯೋತ್ಪಾದನೆ ಘಟನೆ ಕುರಿತಂತೆ ಕಸಬ್ ನೀಡಿದ್ದ ಹೇಳಿಕೆ ಅನ್ವಯ ಪಾಕಿಸ್ತಾನ ಆತನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವುದಾಗಿ ಹೇಳಿದರು. ಆ ನಿಟ್ಟಿನಲ್ಲಿ ಪಾಕಿಸ್ತಾನದ ಕಾನೂನಿನ ಅನ್ವಯ, ಮುಂಬೈ ದಾಳಿಗೆ ಕುರಿತಂತೆ ಶಂಕಿತ ಏಳು ಮಂದಿ ವಿಚಾರಣೆ ನಡೆಸುವ ಸಂದರ್ಭದಲ್ಲಿ ಕಸಬ್ ಕೂಡ ನ್ಯಾಯಾಲಯದಲ್ಲಿ ಹಾಜರಿರಬೇಕಾಗಿರುವುದು ಅವಶ್ಯಕ ಎಂದು ವಿವರಿಸಿದರು.

ಆದರೆ ಭಾರತ ಈಗಾಗಲೇ ಕಸಬ್‌ನನ್ನು ಪಾಕಿಸ್ತಾನಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ತಿಳಿಸಿರುವ ಹಿನ್ನೆಲೆಯಲ್ಲಿ, ಆತನ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸ್ ಅಧಿಕಾರಿ ಮತ್ತು ಮ್ಯಾಜಿಸ್ಟ್ರೇಟ್ ಅನ್ನು ನ್ಯಾಯಾಲಯಕ್ಕೆ ಕಳುಹಿಸಿ, ಆತ ನೀಡಿರುವ ಹೇಳಿಕೆಯ ಸತ್ಯಾಸತ್ಯತೆ ಪರಿಶೀಲನೆಗೆ ಅವಕಾಶ ಮಾಡಿಕೊಡಬೇಕೆಂದು ಪಾಕ್ ಕೋರಿದೆ.

ಒಂದು ವೇಳೆ ಪಾಕಿಸ್ತಾನದ ಕೋರಿಕೆಯನ್ನು ತಳ್ಳಿಹಾಕಿ, ಭಾರತದಿಂದ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ಅಧಿಕಾರಿಗಳು ಪಾಕಿಸ್ತಾನ ಕೋರ್ಟ್‌ಗೆ ಹಾಜರಾಗದಿದ್ದಲ್ಲಿ, ನಾವು ಕಸಬ್‌ನನ್ನು ಅಪರಾಧಿ ಎಂದು ಘೋಷಿಸುವುದಾಗಿ ಮಲಿಕ್ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ