ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನನ್ನ ಅಪ್ಪ ಈಗಲೂ ಜೀವಂತವಾಗಿದ್ದಾರೆ: ಲಾಡೆನ್ ಪುತ್ರ ಒಮರ್ (Osama bin Laden | Omar bin Laden | al Qaeda | London)
Bookmark and Share Feedback Print
 
ಅಲ್ ಖಾಯಿದಾ ಮುಖಂಡ ಒಸಾಮಾ ಬಿನ್ ಲಾಡೆನ್ ಜೀವಂತವಾಗಿರುವುದಾಗಿ ಆತನ ಪುತ್ರ ಒಮರ್ ಬಿನ್ ಲಾಡೆನ್ ತಿಳಿಸಿದ್ದಾನೆ. ಆದರೆ ಅಪ್ಪ ಎಲ್ಲಿದ್ದಾನೆ ಎಂಬುದು ತನಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ರಹಸ್ಯ ಕಾಪಾಡಿದ್ದಾನೆ.

'ನನ್ನ ತಂದೆ ಈ ಭೂಮಿಯ ಮೇಲೆಯೇ ಇದ್ದಾರೆ. ಆದರೆ ಅವರು ಎಲ್ಲಿ ಠಿಕಾಣಿ ಹೂಡಿದ್ದಾರೆ ಎಂಬುದು ಮಾತ್ರ ಗೊತ್ತಿಲ್ಲ ಎಂದು ದಿ ಸನ್ ಪತ್ರಿಕೆಗೆ ಒಮರ್ ಗುರುವಾರ ತಿಳಿಸಿದ್ದಾನೆ.

ನಮ್ಮ ತಂದೆ ಲಾಡೆನ್ ಇನ್ನೂ ಜೀವಂತವಾಗಿದ್ದಾರೆ. ಆದರೆ ಬಹಳಷ್ಟು ಜನ ಅವರು ಸಾವನ್ನಪ್ಪಿದ್ದಾರೆ ಎಂದೇ ಸುಳ್ಳು ಹೇಳುತ್ತಿದ್ದಾರೆ. ಅಲ್ಲದೇ ಅವರು ಎಲ್ಲಿದ್ದಾರೆ ಎಂಬುದನ್ನು ಯಾವತ್ತಿಗೂ ಪತ್ತೆ ಹಚ್ಚಲು ಸಾಧ್ಯವಿಲ್ಲ ಎಂದು ಕೂಡ ಹೇಳಿದ್ದಾನೆ.

ನಾನು ಈಗಲೂ ನನ್ನ ತಂದೆಯನ್ನು ಪ್ರೀತಿಸುತ್ತಿದ್ದೇನೆ. ಯಾಕೆಂದರೆ ಅವರು ನನ್ನ ತಂದೆ. ಆದರೂ ನಾನು ನನ್ನ ತಂದೆಯ ಪ್ರೀತಿಯಿಂದ ವಂಚಿತರಾಗಿದ್ದೇವೆ. ನಿಜಕ್ಕೂ ನಾವು ತುಂಬಾ ವಿಭಿನ್ನ ವ್ಯಕ್ತಿತ್ವ ಹೊಂದಿದ್ದೇವೆ. ನಮಗೆ ಶಾಂತಿ ಮುಖ್ಯವಾಗಿದೆ ಎಂದು ಒಮರ್ ಅಭಿಪ್ರಾಯವ್ಯಕ್ತಪಡಿಸಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ