ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಉಗ್ರರಿಗೆ ಪಾಕಿಸ್ತಾನ ಸ್ವರ್ಗ ಇದ್ದಂತೆ: ಅಮೆರಿಕ (Lashkar-e-Toiba | Mumbai terror attack | Pakistan | epicentre)
Bookmark and Share Feedback Print
 
ಲಷ್ಕರ್ ಇ ತೊಯ್ಬಾ ಸೇರಿದಂತೆ ಐದು ಪ್ರಮುಖ ಭಯೋತ್ಪಾದನಾ ಸಂಘಟನೆಗಳು ಮುಂಬೈ ಭಯೋತ್ಪಾದನಾ ದಾಳಿಗೆ ಹೊಣೆಯಾಗಿದ್ದು, ಆ ನಿಟ್ಟಿನಲ್ಲಿ ಪಾಕಿಸ್ತಾನದಲ್ಲಿರುವ ಉಗ್ರರಿಗೆ ಅಮೆರಿಕಕ್ಕೆ ಬೆದರಿಕೆ ಹಾಕಲು ಅದೊಂದು ಸ್ವರ್ಗ ತಾಣವಾಗಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ದೂರಿದ್ದಾರೆ.

ಪಾಕಿಸ್ತಾನದ ಪೂರ್ವ ಭಾಗದಲ್ಲಿ ಕಾನೂನು ಎಂಬುದೇ ಇಲ್ಲದಂತಾಗಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಗಡಿಭಾಗದಲ್ಲಿ ಠಿಕಾಣಿ ಹೂಡಿ ಕಾರ್ಯಾಚರಿಸುತ್ತಿರುವ ಉಗ್ರರಿಗೆ ಪಾಕ್ ಸ್ವರ್ಗತಾಣವಾಗಿದ್ದು, ಅದರಿಂದ ಅಮೆರಿಕಕ್ಕೂ ಬೆದರಿಕೆ ಹಾಕುತ್ತಿವೆ ಎಂದು ಅಫ್ಘಾನಿಸ್ತಾನ್ ಮತ್ತು ಪಾಕಿಸ್ತಾನದ ವಿಶೇಷ ರಾಯಭಾರಿ ರಿಚರ್ಡ್ ಹಾಲ್‌ಬ್ರೂಕ್ ತಿಳಿಸಿದ್ದಾರೆ.

ಉಗ್ರರಿಗೆ ನೇರವಾಗಿ ತಾಲಿಬಾನ್ ಜೊತೆ ಸಂಪರ್ಕ ಇದೆ, ಅಲ್ಲದೇ ಅವರೆಲ್ಲ ಪಾಕಿಸ್ತಾನದೊಳಗೆ ಇದ್ದಾರೆ. ಆ ನಿಟ್ಟಿನಲ್ಲಿ ಕಳೆದ ವರ್ಷ ಮತ್ತು ಪ್ರಸಕ್ತ ಸಾಲಿನ ಆರು ತಿಂಗಳ ಕಾಲ ಉಗ್ರರ ವಿರುದ್ಧ ಹೋರಾಟ ನಡೆಸಿರುವ ಪಾಕಿಸ್ತಾನ ಮಿಲಿಟರಿ ಪಡೆಯ ಸಾಧನೆ ಉತ್ತಮವಾಗಿದೆ ಎಂದರು.

ಅಷ್ಟೇ ಅಲ್ಲ ಉಗ್ರರನ್ನು ಸಂಪೂರ್ಣವಾಗಿ ಮಟ್ಟಹಾಕಿ ಅಫ್ಘಾನಿಸ್ತಾನದಲ್ಲಿ ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಸ್ಥಿರತೆ ಹೊಂದುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕಾಗಿದೆ ಎಂದು ಅವರು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ