ವೆಸ್ಟ್‌ಬ್ಯಾಂಕ್‌ನಲ್ಲಿ 13 ಪ್ಯಾಲಿಸ್ತೇನಿಯರನ್ನು ಆಶ್ರುವಾಯು ಬಳಸಿ ಇಸ್ರೇಲ್ ಸೈನಿಕರು ಗುರುವಾರ ಬಂಧಿಸಿದ್ದಾರೆ ಎಂದು ಮಿಲಿಟರಿ ತಿಳಿಸಿದೆ.
ಪ್ಯಾಲಿಸ್ತೇನ್ ಪ್ರಜೆಗಳನ್ನು ಬಂಧಿಸಲು ಯತ್ನಿಸಿದಾಗ ಅವರು ಕಲ್ಲು ತೂರಾಟ ನಡೆಸಿದ ಹಿನ್ನೆಲೆಯಲ್ಲಿ ಇಸ್ರೇಲ್ ಪಡೆಗಳು ಆಶ್ರುವಾಡಿ ಸಿಡಿಸಿ ನಂತರ ಅವರನ್ನು ಬಂಧಿಸಿವೆ. ಇಲ್ಲಿನ ನಾಲ್ಬಾಸ್ ಸಮೀಪದ ಬೀಟ್ ಫುರಿಕ್ ಗ್ರಾಮದಲ್ಲಿ ಎಂಟು ಮಂದಿಯನ್ನು ಹೀಗೆ ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ವರದಿಗಳು ಹೇಳಿವೆ.
ಅದೇ ಹೊತ್ತಿಗೆ ಇಬ್ಬರು ಮಹಿಳೆಯರೂ ಸೇರಿದಂತೆ ಇಸ್ರೇಲ್ ಬಂಧಿಸಿರುವ ಎಂಟು ಮಂದಿ ಪ್ಯಾಲಿಸ್ತೇನ್‌ನ ಪಾಪ್ಯುಲರ್ ಫ್ರಂಟ್ ಆಫ್ ಲಿಬರೇಷನ್‌ಗೆ ಸೇರಿದವರು ಎಂದು ಪ್ಯಾಲಿಸ್ತೇನ್ ಭದ್ರತಾ ಮೂಲಗಳು ಹೇಳಿವೆ.
ಬಳಿಕ ನಾಲ್ಬಾಸ್ ಸಮೀಪದ ಇತರ ಗ್ರಾಮಗಳಲ್ಲಿ ಐವರು ಪ್ಯಾಲಿಸ್ತೇನ್ ಪ್ರಜೆಗಳನ್ನು ಇಸ್ರೇಲ್ ಮಿಲಿಟರಿ ಬಂಧಿಸಿದೆ.