ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚೀನಾ ಆನ್‌ಲೈನ್ ಜನಸಂಖ್ಯೆ 42 ಕೋಟಿ (online population | China | Communist government | China Internet Network Information Center)
Bookmark and Share Feedback Print
 
ಚೀನಾದ ಆನ್‌ಲೈನ್ ಬಳಕೆದಾರರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದ್ದು, 42 ಕೋಟಿ ತಲುಪಿದೆಯೆಂದು ಸಮೀಕ್ಷೆಯೊಂದು ವರದಿ ಮಾಡಿವೆ. ಸೆಲ್ ಫೋನ್‌‍ನಲ್ಲಿ ಅಂತರಜಾಲ ಬಳಸುವವರ ಸಂಖ್ಯೆ ಹೆಚ್ಚಾಗಿರುವುದರಿಂದಾಗಿ ಆನ್‌ಲೈನ್ ಇರುವವರ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡಿದೆ.

ವಿಶ್ವದಲ್ಲಿಯೇ ಅತೀ ದೊಡ್ಡ ಆನ್‌ಲೈನ್ ಜನಸಂಖ್ಯೆಯನ್ನು ಚೀನಾ ಹೊಂದಿದೆ. ಆದರೆ ಭಾರೀ ಜನಪ್ರಿಯತೆ ಹೊಂದಿರುವ ಇಂಟೆರ್ನೆಟ್ ಮಾಹಿತಿ ಹರಿವನ್ನು ಹತೋಟಿಯಲ್ಲಿಡುವಲ್ಲಿ ಅಲ್ಲಿನ ಕಮ್ಯೂನಿಸ್ಟ್ ಸರಕಾರವು ದಶಕಗಳಿಂದ ಸವಾಲನ್ನು ಎದುರಿಸುತ್ತಿದೆ.

ವರ್ಷದ ಮೊದಲ ಆರು ತಿಂಗಳಲ್ಲೇ ಚೀನಾದ ನೆಟ್ ಬಳಕೆದಾರರ ಸಂಖ್ಯೆಯು 36 ಮಿಲಿಯನ್ ವೃದ್ಧಿಯಾಗಿತ್ತು ಎಂದು ಚೀನಾ ಇಂಟರ್ನೆಟ್ ನೆಟ್‌ವರ್ಕ್ ಮಾಹಿತಿ ಕೇಂದ್ರ ವರದಿ ಮಾಡಿದೆ. 3ಜಿ ಸೌಲಭ್ಯಗಳು ಪ್ರಾರಂಭವಾದ ನಂತರ ವೀಡಿಯೋ ಹಾಗೂ ವೆಬ್ ಉತ್ಪನ್ನಗಳು ಮತ್ತಷ್ಟು ಸಲೀಸಾಗಿ ಲಭಿಸುವುದೇ ಮೊಬೈಲ್ ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಾಗಲು ಕಾರಣವಾಗಿದೆ ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ