ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜು. 18ರಂದು 'ನೆಲ್ಸನ್ ಮಂಡೇಲಾ ಡೇ': ವಿಶ್ವಸಂಸ್ಥೆ (Nelson Mandela Day | United Nations | South Africa | Nobel Peace Prize)
Bookmark and Share Feedback Print
 
ದಕ್ಷಿಣ ಆಫ್ರಿಕಾ ಸ್ವಾತಂತ್ರ್ಯ ಹೋರಾಟಗಾರ ನೆಲ್ಸನ್ ಮಂಡೇಲಾ ಹೆಸರನ್ನು ಸದಾ ನೆನಪಿನಲ್ಲಿರುವಂತೆ ಮಾಡಲು ವಿಶ್ವಸಂಸ್ಥೆ ಮುಂದಾಗಿದ್ದು, ಜುಲೈ 18ನ್ನು ನೆಲ್ಸನ್ ಮಂಡೇಲಾ ದಿನವನ್ನಾಗಿ ಘೋಷಿಸಿ, ದಕ್ಷಿಣ ಆಫ್ರಿಕಾದ ರಾಷ್ಟ್ರಪಿತರನ್ನು ಗೌರವವಿಸಲಿದೆ.

2009 ನವೆಂಬರ್‌ನಲ್ಲಿ ನಡೆದ 192 ಸದಸ್ಯ ರಾಷ್ಟ್ರಗಳುಳ್ಳ ವಿಶ್ವಸಂಸ್ಥೆ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿತ್ತು. ಮಂಡೇಲಾ ಜನ್ಮದಿನದಂದೇ ಇದನ್ನು ಆಚರಿಸಲಾಗುತ್ತಿದೆ. ಆ ಮೂಲಕ ನೊಬೆಲ್ ಪ್ರಶಸ್ತಿ ವಿಜೇತ ಮಾನವ ಹಕ್ಕು ಹೋರಾಟಗಾರನನ್ನು ಗುರುತಿಸಲಾಗುತ್ತಿದೆ ಎಂದು ಯುಎನ್ ವಕ್ತಾರ ಫರ್ಹಾನ್ ಉಲ್ ಹಕ್ ತಿಳಿಸಿದ್ದಾರೆ.

ಈ ಮಹತ್ತರ ದಿನವನ್ನು ಅಂಗೀಕರಿಸುವ ಮೂಲಕ ಜನರ ಒಳಿತಿಗಾಗಿ ಸಾಕಷ್ಟು ಯಾತನೆ ಅನುಭವಿಸಿದ ಆ 'ಶ್ರೇಷ್ಠ ವ್ಯಕ್ತಿ'ಗೆ ಅಂತಾರಾಷ್ಟ್ರೀಯ ಸಮುದಾಯವು ಶ್ಲಾಘನೆ ಸಲ್ಲಿಸುತ್ತಿದೆ ಎಂದು ವಿಶ್ವಸಂಸ್ಥೆ ಮಹಾ ಸಭೆಯ ಅಧ್ಯಕ್ಷರಾಗಿರುವ ಆಲಿ ಟ್ರಾಕಿ ತಿಳಿಸಿದರು.

ಅದೇ ಹೊತ್ತಿಗೆ, ಆಫ್ರಿಕಾದ ಸ್ವಾತಂತ್ರ್ಯ ಮತ್ತು ಏಕತೆಗಾಗಿ ಪ್ರಮುಖ ಪಾತ್ರ ವಹಿಸಿರುವ ಮಂಡೇಲಾರಿಗೆ ಮಹಾ ಸಭೆಯು ಅಭಿನಂದನೆ ಸಲ್ಲಿಸಿತ್ತು. ಜುಲೈ 18ರಂದು ವರ್ಣಭೇದ ನೀತಿ ಇಲ್ಲದ ಹಾಗೂ ಲಿಂಗಭೇದವಿಲ್ಲದ ಪ್ರಜಾಪ್ರಭುತ್ವ ದಕ್ಷಿಣ ಆಫ್ರಿಕಾ ರೂಪೀಕರಣಕ್ಕೆ ಪ್ರಾಮಾಣಿಕ ಯತ್ನ ನಡೆಸಿದ ನೆಲ್ಸನ್‌ರನ್ನು ಗೌರವಿಸಲಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ