ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮೆಕ್ಸಿಕೋ ಕೊಲ್ಲಿ; ತೈಲ ಹರಿವು ಸ್ಥಗಿತಗೊಳಿಸಿದ ಬಿಪಿ (BP | Gulf of Mexico | oil leak | Barack Obama)
Bookmark and Share Feedback Print
 
ಕಳೆದ ಮೂರು ತಿಂಗಳಲ್ಲೇ ಮೊದಲ ಬಾರಿಗೆ ಮೆಕ್ಸಿಕೋ ಕೊಲ್ಲಿಗೆ ತೈಲ ಸೋರಿಕೆಯನ್ನು ಸ್ಥಗಿತಗೊಳಿಸುವಲ್ಲಿ ಬ್ರಿಟನ್ ಎನರ್ಜಿ ದೈತ್ಯ ಕಂಪನಿ ಬಿಪಿ ಗುರುವಾರ ಯಶಸ್ವಿಯಾಗಿದೆ.

ಬಿಪಿ ಕಂಪನಿ ಇದನ್ನು ಷೋಷಣೆ ಮಾಡುತ್ತಿದ್ದಂತೆ ಕರಾವಳಿ ಪ್ರದೇಶದ ನಿವಾಸಿಗಳಲ್ಲಿ ಹೊಸ ನಿರೀಕ್ಷೆ ಮೂಡಿದ್ದು, ನೈಸರ್ಗಿಕ ವಿಕೋಪದಿಂದಾಗಿ ಕಳೆದ 13 ವಾರಗಳಿಂದ ಹದಗೆಟ್ಟಿರುವ ಜೀವಜಾತಿಗಳಿಗೆ ಹೊಸ ಭರವಸೆ ಸಿಕ್ಕಂತಾಗಿದೆ.

ಭಾರೀ ಪ್ರಮಾಣದ ತೈಲ ಸೋರಿಕೆಯಿಂದಾಗಿ ಟೆಕ್ಸಾಸ್, ಲೂಸಿಯಾನಾ, ಮಿಸಿಸಿಪ್ಪಿ, ಅಲಬಾಮಾ ಮತ್ತು ಫ್ಲೋರಿಡಾ ಪ್ರದೇಶದ ಜಲಚರಗಳು, ಇತರ ಜೀವಿಗಳು ಅವಸಾನದ ಭೀತಿ ಎದುರಿಸುತ್ತಿದ್ದವು.

ತೈಲ ಹರಿವನ್ನು ಸ್ಥಗಿತಗೊಳಿಸಿದ ಬಿಪಿ ಕ್ರಮವನ್ನು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಆಡಳಿತವು ಕೂಡಾ ಸ್ವಾಗತಿಸಿದ್ದು, ಇದನ್ನು ಧನಾತ್ಮಕ ಅಂಶ ಎಂದು ಹೇಳಿದೆ.

ಇದೇ ವೇಳೆ ಬಿಪಿ, ನಿರ್ವಾಹಕ ಮುಖ್ಯಸ್ಥ ಡೌಗ್ ಸುಟ್ಲೆಸ್, ಇದು ಹರ್ಷಗೊಳ್ಳುವ ಸಮಯವಲ್ಲ, ಬದಲಾಗಿ ಇನ್ನು ಹೆಚ್ಚಿನ ಪ್ರಯೋಗಗಳ ಅಗತ್ಯವಿದೆ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ