ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆ.21ಕ್ಕೆ ಚುನಾವಣೆ;ಮತ್ತೆ ನಮ್ಮನ್ನೇ ಆರಿಸಿ: ಆಸೀಸ್ ಪಿಎಂ (Australia | Aug 21 elections | Julia Gillard | Labor Party,)
Bookmark and Share Feedback Print
 
ಕಳೆದ ಮೂರು ವಾರಗಳ ಹಿಂದಷ್ಟೇ ಆಸ್ಟ್ರೇಲಿಯಾದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದ ಜೂಲಿಯಾ ಗಿಲ್ಲಾರ್ಡ್ ಅವರು, ಆಗೋಸ್ಟ್ 21ರಂದು ದೇಶದ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಶನಿವಾರ ಘೋಷಿಸಿದ್ದಾರೆ.

ಚುನಾವಣೆಯಲ್ಲಿ ದೇಶದ ಮತದಾರರು ಮತ್ತೊಮ್ಮೆ ತಮ್ಮ ಪಕ್ಷವನ್ನೇ ಬೆಂಬಲಿಸಿ ಎರಡನೇ ಅವಧಿಯ ಮೂರು ವರ್ಷಗಳ ಆಡಳಿತಾವಧಿಯನ್ನು ಪೂರ್ಣಗೊಳಿಸುವ ಅವಕಾಶ ಕಲ್ಪಿಸಿಕೊಡಬೇಕೆಂದು ಗಿಲ್ಲಾರ್ಡ್ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಲೇಬರ್ ಪಾರ್ಟಿಯ ಕೇವಿನ್ ರೂಡ್ ಸ್ವತಃ ಪಕ್ಷದ ಸಚಿವರ ವಿಶ್ವಾಸ ಕಳೆದುಕೊಂಡ ನೆಲೆಯಲ್ಲಿ ಪ್ರಧಾನಿ ಗದ್ದುಗೆಗೆ ರಾಜೀನಾಮೆ ನೀಡಿದ ನಂತರ, ಜೂಲಿಯಾ ಅವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಆ ನಿಟ್ಟಿನಲ್ಲಿ ಶೀಘ್ರವೇ ಚುನಾವಣೆ ನಡೆಸುವುದಾಗಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಜೂಲಿಯಾ ಅವರು ನೀಡಿದ ಭರವಸೆಯಂತೆಯೇ ಇದೀಗ ಚುನಾವಣೆಯ ದಿನಾಂಕ ಘೋಷಿಸಿದ್ದಾರೆ.

ಚುನಾವಣೆಯಲ್ಲಿ ಆಸ್ಟ್ರೇಲಿಯ ಜನರು ಮತ್ತೆ ಲೇಬರ್ ಪಾರ್ಟಿಯನ್ನೇ ಬೆಂಬಲಿಸುವ ಮೂಲಕ ಆಡಳಿತ ನಡೆಸುವ ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿಕೊಂಡಿರುವ ಜೂಲಿಯಾ, ಆ ನೆಲೆಯಲ್ಲಿ ಆಸ್ಟ್ರೇಲಿಯಾದಲ್ಲಿ ಸ್ಥಿರ ಮತ್ತು ಸುದೃಢವಾದ ಆಡಳಿತ ನೀಡುವ ಯೋಜನೆ ಹೊಂದಲಾಗಿದೆ ಎಂದು ಭರವಸೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ