ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇರಾನ್ ಅವಳಿ ಸ್ಫೋಟ ಪ್ರಕರಣ: 40 ಉಗ್ರರ ಸೆರೆ (Iran | mosque bombing | Ahmad Reza | Sunni insurgency)
Bookmark and Share Feedback Print
 
ಆಗ್ನೇಯ ನಗರದ ಜಾಹೇಡನ್‌ನಲ್ಲಿನ ಮಸೀದಿಯ ಹೊರಭಾಗದಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ 40 ಮಂದಿಯನ್ನು ಇರಾನ್ ಪೊಲೀಸರು ಬಂಧಿಸಿರುವುದಾಗಿ ಸ್ಥಳೀಯ ಮಾಧ್ಯಮವೊಂದರ ವರದಿ ತಿಳಿಸಿದೆ.

ಬಾಂಬ್ ಸ್ಫೋಟಿಸುವ ಮೂಲಕ ಜಾಹೇಡನ್ ಪ್ರದೇಶದಲ್ಲಿ ಭದ್ರತೆ ಬಗ್ಗೆ ಕಳವಳ ಮೂಡಿಸಲು ಸಂಚು ರೂಪಿಸಿರುವುದಾಗಿ ಇರಾನ್‌ನ ಸಹಾಯಕ ಪೊಲೀಸ್ ಅಧಿಕಾರಿ ಜನರಲ್ ಅಹ್ಮದ್ ರೆಜಾ ರಾಡನ್ ವಿವರಿಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಸುನ್ನಿ ಬಂಡುಕೋರರು ಆಗ್ನೇಯ ಪ್ರದೇಶದಲ್ಲಿ ಹಲವಾರು ಬಾಂಬ್ ಸ್ಫೋಟಗಳನ್ನು ನಡೆಸಿರುವ ಬಗ್ಗೆ ಹೊಣೆ ಹೊತ್ತುಕೊಂಡಿವೆ.

ಅಮೆರಿಕದ ವಿರುದ್ಧ ಕೆಂಡಕಾರುತ್ತಿರುವ ಉಗ್ರರು ಈ ರೀತಿಯಾಗಿ ಬಾಂಬ್ ಸ್ಫೋಟ ನಡೆಸುತ್ತಿರುವುದಾಗಿ ರಾಜ್ಯ ಸ್ವಾಮಿತ್ವದ ಟಿವಿ ಫೂಟೇಜ್‌ವೊಂದು ವಿವರಿಸಿದೆ. ಪ್ರಕರಣದ ಬೆನ್ನತ್ತಿರುವ ಪೊಲೀಸರು ಇದೀಗ ಶಂಕಿತ ನಲ್ವತ್ತು ಮಂದಿಯನ್ನು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ