ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮತ್ತೆ ರಾಗ ಬದಲಿಸಿದ ಪಾಕ್: ಭಾರತದ ಜತೆ ಮಾತುಕತೆ (Islamabad | India | Pakistan | Gilani | Qureshi | Manmohan Singh)
Bookmark and Share Feedback Print
 
ಭಾರತ ಪಾಕ್ ವಿದೇಶಾಂಗ ಸಚಿವರ ನಡುವೆ ಎರಡು ದಿನಗಳ ಕಾಲದ ಮಾತುಕತೆಯಲ್ಲಿ ಭಾರತದ ವಿರುದ್ಧ ಚುಚ್ಚು ಮಾತನಾಡಿ ಅವಮಾನಿಸಿದ ಘಟನೆಯ ಬೆನ್ನಲ್ಲೇ, ಇದೀಗ ಉಲ್ಟಾ ಹೊಡೆದಿರುವ ಪಾಕಿಸ್ತಾನ, ನಾವು ಭಾರತದ ಜೊತೆ ದ್ವಿಪಕ್ಷೀಯ ಮಾತುಕತೆ ಮುಂದುವರಿಯಬೇಕೆಂದು ಆಶಿಸುತ್ತೇವೆ. ಆ ನಿಟ್ಟಿನಲ್ಲಿ ಭಾರತ ಮತ್ತು ಪಾಕ್ ನಡುವಿ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳಬೇಕೆಂಬ ಅಂಶವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಶನಿವಾರ ತಿಳಿಸಿದೆ.

ಎರಡು ದಿನಗಳ ಕಾಲ ಪಾಕಿಸ್ತಾನದಲ್ಲಿ ನಡೆದ ಮಾತುಕತೆ ನಂತರ ಪಾಕ್ ವಿದೇಶಾಂಗ ಸಚಿವ ಶಾ ಮಹಮದ್ ಖುರೇಷಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ, ಭಾರತ ಮಾತುಕತೆಗೆ ಸಿದ್ದವೇ ಆಗಿಲ್ಲ. ನಿರ್ದಿಷ್ಟ ವಿಷಯದ ಮೇಲಷ್ಟೇ ಗಮನ ಕೇಂದ್ರೀಕರಿಸಿ, ಸಮಗ್ರ ಚರ್ಚೆಯ ಔದಾರ್ಯ ತೋರಿಲ್ಲ ಎಂದು ಆರೋಪಿಸಿದ್ದರು.

ತನಗೆ ಮಹತ್ವದ್ದು ಎಂದು ಹೇಳುವ ವಿಷಯಗಳತ್ತ ಮಾತ್ರವೇ ಭಾರತವು ಗಮನ ಕೇಂದ್ರೀಕರಿಸಿದರೆ, ಮಾತುಕತೆ ಫಲಪ್ರದವಾಗುತ್ತದೆ ಎಂಬುದರಲ್ಲಿ ತನಗೆ ನಂಬಿಕೆ ಇಲ್ಲ. ಅಲ್ಲದೇ ಕಾಶ್ಮೀರವನ್ನು ಹೊರತುಪಡಿಸಿ ಮಾತುಕತೆ ಸಾಧ್ಯವೇ ಇಲ್ಲ ಎಂದು ಹೇಳಿ ಭಾರತದ ಪಿಳ್ಳೈ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇಷ್ಟಾದರೂ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಮೌನಕ್ಕೆ ಶರಣಾಗಿದ್ದರು. ಈ ಬೆಳವಣಿಗೆ ಬಗ್ಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.

ಮೂರು ಬಿಟ್ಟವರು ಊರಿಗೆ ದೊಡ್ಡೋರು ಎಂಬಂತೆ ಇದೀಗ ಪಾಕ್ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಮತ್ತು ವಿದೇಶಾಂಗ ಸಚಿವ ಶಾ ಮಹಮದ್ ಖುರೇಷಿ ರಾಜಿಸಂಧಾನದ ಪ್ರಕಟಣೆಯಲ್ಲಿ, ವಿದೇಶಾಂಗ ಸಚಿವರ ಮಟ್ಟದ ಮಾತುಕತೆ ವೇಳೆ ವಾಗ್ದಾಳಿ ನಡೆಸಿರುವುದರಿಂದ ಹಿಂದೆ ಸರಿದಿದ್ದು, ಭಾರತದೊಂದಿಗೆ ಮಾತುಕತೆ ನಡೆಯಬೇಕು ಎಂದು ತಿಳಿಸಿದ್ದಾರೆ.

ಅಲ್ಲದೇ, ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಗೌರವಾನ್ವಿತ ವ್ಯಕ್ತಿಯಾಗಿದ್ದಾರೆ ಎಂದು ಬಣ್ಣಿಸಿರುವ ಗಿಲಾನಿ, ಭಾರತದೊಂದಿಗೆ ಮಾತುಕತೆ ನಡೆಸುವ ಬಯಕೆಯನ್ನು ಪಾಕಿಸ್ತಾನ ಹೊಂದಿದೆ. ಅದೇ ರೀತಿ ಎಲ್ಲಾ ಸಮಸ್ಯೆಗಳ ಕುರಿತು ಮಾತುಕತೆ ನಡೆಸುವ ಬಗ್ಗೆಯೂ ಪ್ರಧಾನಿ ಸಿಂಗ್ ಭರವಸೆ ನೀಡಿದ್ದರು ಎಂದರು.

ಲಾಹೋರ್‌ನ ಸಮಾರಂಭವೊಂದರಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಭಾರತದೊಂದಿಗೆ ಮಾತುಕತೆ ಮುಂದುವರಿಸುವ ಇಚ್ಚೆ ಹೊಂದಿದ್ದೇವೆ. ಯಾವಾಗ ಮಾತುಕತೆ ಆರಂಭವಾಗುತ್ತದೆಯೋ, ಆ ಸಂದರ್ಭದಲ್ಲಿ ಎಲ್ಲಾ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತೇವೆ. ಅದಕ್ಕಿಂತ ಹೆಚ್ಚಿಗೆ ಏನನ್ನೂ ಹೇಳಲಾರೆ ಎಂದು ಗಿಲಾನಿ ಸ್ಪಷ್ಟಪಡಿಸಿದರು.

ಶಾ ಮಹಮದ್ ಖುರೇಷಿ ಮತ್ತು ಭಾರತದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ನಡುವಿನ ಮಾತುಕತೆ ಕುರಿತಂತೆ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದರು.

ಹೌದು...ಭಾರತದೊಂದಿಗೆ ನಮ್ಮ ಸಂಬಂಧ ಸಹಜಸ್ಥಿತಿಯಲ್ಲೇ ಮುಂದುವರಿಯಬೇಕೆಂಬ ಬಗ್ಗೆ ತುಂಬಾ ಗಂಭೀರವಾಗಿದ್ದೇವೆ ಎಂದು ಖುರೇಷಿ ಇಸ್ಲಾಮಾಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು. ಮಾತುಕತೆ ಪ್ರಕ್ರಿಯೆಯನ್ನು ಮುಂದುವರಿಸಲು ನಾವು ಒಪ್ಪಿದ್ದೇವೆ. ಒಂದು ವೇಳೆ ಮಾತುಕತೆಯನ್ನು ಮುಂದುವರಿಸುವುದಾಗಿ ನಿರ್ಧರಿಸಿದ್ದಲ್ಲಿ ಅದೊಂದು ಶುಭ ಶಕುನವಾಗಲಿದೆ ಎಂದರು.

ಕೃಷ್ಣ ರಾಯಭಾರ ವಿಫಲ-ಭಾರತ ಮುಖಕ್ಕೆ ಪಾಕ್ ಮಸಿ

ಪಾಕ್ ಟೀಕಿಸುತ್ತಿದ್ದರೂ ಮಗುಮ್ಮಾಗಿ ಕುಳಿತಿದ್ದರು ಕೃಷ್ಣ!
ಸಂಬಂಧಿತ ಮಾಹಿತಿ ಹುಡುಕಿ