ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬುರ್ಖಾ ತೆಗೀರಿ, ಇಲ್ಲಾಂದ್ರೆ ಭೇಟಿಯಾಗಲ್ಲ: ಬ್ರಿಟೀಷ್ ಸಂಸದ (British MP | Muslims | Islamic dress | Philip Hollobone)
Bookmark and Share Feedback Print
 
ತನ್ನ ಕ್ಷೇತ್ರದ ಮುಸ್ಲಿಂ ಮಹಿಳೆಯರನ್ನು ತಾನು ಮುಖಾಮುಖಿಯಾಗಬೇಕಾದರೆ ಅವರು ತಮ್ಮ ಮುಖ ಪರದೆಯನ್ನು ತೆಗೆಯಬೇಕು, ಇಲ್ಲದೇ ಇದ್ದರೆ ನಾನು ಭೇಟಿಯಾಗಲಾರೆ ಎಂದಿರುವ ಬ್ರಿಟೀಷ್ ಸಂಸದರೊಬ್ಬರು ಇದೀಗ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.

ಬ್ರಿಟನ್‌ನ ಕತ್ತೆರಿಂಗ್ ಎಂಬಲ್ಲಿನ ಕನ್ಸರ್ವೇಟಿವ್ ಸಂಸದ ಫಿಲಿಪ್ ಹಾಲೋಬೋನ್ ಎಂಬವರೇ ಇದೀಗ ಮುಸ್ಲಿಮರ ತೀವ್ರ ಟೀಕೆಗೆ ಗುರಿಯಾಗಿರುವವರು.

ನಾನು ಮುಸ್ಲಿಂ ಮಹಿಳೆಯೊಬ್ಬಳನ್ನು ಭೇಟಿಯಾಗುವುದಾದರೆ, ದಯವಿಟ್ಟು ಮುಖಪರದೆಯನ್ನು ತೆಗೆಯಿರಿ ಎಂದು ಆಕೆಗೆ ಮನವಿ ಮಾಡುತ್ತೇನೆ; ಅದಕ್ಕೆ ನಕಾರಾತ್ಮಕ ಉತ್ತರ ಬಂದರೆ, ನಾನು ಭೇಟಿಯಾಗಲಾರೆ. ಯಾಕೆಂದರೆ ಮುಖ ಪರದೆಯನ್ನು ಹಾಕಿಕೊಂಡಿದ್ದರೆ, ಆಕೆ ಯಾರೆಂದು ನೋಡುವುದು ನನ್ನಿಂದ ಸಾಧ್ಯವಾಗುವುದಿಲ್ಲ, ಆದರೆ ಆಕೆಗೆ ಅದು ಸಾಧ್ಯವಾಗಿರುತ್ತದೆ. ಇದು ನನಗೆ ಸರಿಯೆನಿಸುವುದಿಲ್ಲ. ಹಾಗಾಗಿ ಅದರ ಬದಲಿಗೆ ಸಂಪರ್ಕದ ಮತ್ತೊಂದು ವಿಧಾನವಾದ ಪತ್ರವನ್ನು ಬಳಸಲು ಸೂಚಿಸುತ್ತೇನೆ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಅದೇ ಹೊತ್ತಿಗೆ ಬುರ್ಖಾ ಅಥವಾ ನಿಖಾಬ್ ಧರಿಸಬೇಕೆಂದು ಇಸ್ಲಾಮಿಕ್ ಧಾರ್ಮಿಕ ಮುಖಂಡರು ಅಥವಾ ಮೌಲ್ವಿಗಳು ಹೇಳುತ್ತಿಲ್ಲ. ಇದು ಧಾರ್ಮಿಕ ಅಗತ್ಯವೂ ಅಲ್ಲ. ನನ್ನ ಪ್ರಕಾರ ಇದು ಅನಗತ್ಯವಾದುದು ಎಂದಿದ್ದಾರೆ.

ಇತ್ತೀಚೆಗಷ್ಟೇ ಬುರ್ಖಾ ನಿಷೇಧಿಸಬೇಕೆಂದು ವೈಯಕ್ತಿಕ ಸದಸ್ಯರ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಮೂಲಕ ಈ ಸಂಸದ ಗಮನ ಸೆಳೆದಿದ್ದರು. ಯೂರೋಪಿಯನ್ ರಾಷ್ಟ್ರಗಳ ನಡೆಯನ್ನು ಇಂಗ್ಲೆಂಡ್ ಕೂಡ ಅನುಸರಿಸುತ್ತದೆ ಎನ್ನುವ ಭರವಸೆಯಲ್ಲಿರುವ ಅವರೀಗ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ