ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿಶ್ವದ ಭಾರೀ ಎದೆಗಾತಿ ಜೀವ ಅಪಾಯದಲ್ಲಿದೆಯಂತೆ! (biggest breasts | Brazilian model | Sheyla Hershey | bloodstream)
Bookmark and Share Feedback Print
 
ವಿಶ್ವದ ಭಾರೀ ಎದೆಗಾತಿಗೆ ಜೀವಭಯ. ಅಂದರೆ ಇದುವರೆಗೆ ಮೂವತ್ತಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಿಕೊಂಡು ತನ್ನ ಸೌಂದರ್ಯವನ್ನು ಬೃಹತ್ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾಕೆ ಈಗ ಅದೇ ಕಾರಣದಿಂದ ಸೋಂಕಿಗೊಳಗಾಗಿ ನರಳುತ್ತಿದ್ದಾಳೆ.

ಬ್ರೆಜಿಲ್ ಮೂಲದ ಶೈಲಾ ಅಲ್ಮೇಡಾ ಹರ್ಶ್ಲೇ ಎಂಬ 30ರ ಹರೆಯದ ಮಾಡೆಲ್ ಇದುವರೆಗೆ 30ಕ್ಕೂ ಹೆಚ್ಚು ಪ್ಲಾಸ್ಟಿಕ್ ಸರ್ಜರಿಗಳನ್ನು ಮಾಡಿಕೊಂಡಿದ್ದಾಳೆ. ಇದೇ ವರ್ಷದ ಜೂನ್ ತಿಂಗಳಲ್ಲಿ ಮತ್ತೆ ತನ್ನ ಎದೆಗಳನ್ನು ವಿಸ್ತರಿಸಲು ಯತ್ನಿಸಿದ ವೇಳೆ ಈ ಸೋಂಕು ಕಾಣಿಸಿಕೊಂಡಿದೆ ಎಂದು ವರದಿಗಳು ಹೇಳಿವೆ.

ಇದು ಆಕೆಯ ಎರಡೂ ಸ್ತನಗಳಿಗೆ ಹಬ್ಬಿದ್ದು, ಭಾರೀ ಅಪಾಯವನ್ನು ಶೈಲಾ ಎದುರಿಸುತ್ತಿದ್ದಾಳೆ. ಇದೇ ಕಾರಣದಿಂದ ಆಕೆಯ ಸ್ತನಗಳನ್ನು ಹಿರಿದಾಗಿಸಲು ಬಳಸಿದ್ದ ಪರಿಕರಗಳನ್ನು ಹೊರ ತೆಗೆದಿದ್ದು, ಇದೀಗ ಬಹುತೇಕ ಸಹಜ ಗಾತ್ರಕ್ಕೆ ಎದೆಯನ್ನು ಮರಳಿಸಲಾಗಿದೆ.

ಶೈಲಾ ವೈದ್ಯರ ಪ್ರಕಾರ ಇದೀಗ ಸ್ತನಗಳಲ್ಲಿ ಕಾಣಿಸಿಕೊಂಡಿರುವ ಸೋಂಕು ರಕ್ತದ ಹರಿವಿನ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ.

ಈ ಹಿಂದೆ ಎಂಟು ಆಪರೇಷನ್ನುಗಳನ್ನು ಮಾಡಿಸಿಕೊಂಡಿದ್ದ ಆಕೆ, 2008ರ ಮೇ ತಿಂಗಳಲ್ಲಿ ತನ್ನ ಸ್ತನಗಳ ಗಾತ್ರವನ್ನು 34ಎಫ್ಎಫ್ಎಫ್‌ಗೆ ಏರಿಸಿಕೊಂಡಿದ್ದಳು. 2009ರ ಜನವರಿ ಅಂತ್ಯದ ಹೊತ್ತಿಗೆ ಮತ್ತೊಂದು ಆಪರೇಷನ್ ಮಾಡಿಸಿ 38ಕೆಕೆಕೆ ಗಾತ್ರಕ್ಕೆ ಹೆಚ್ಚಿಸಿಕೊಂಡಿದ್ದಳು.

ಆ ಮೂಲಕ ವಿಶ್ವದಲ್ಲೇ ಅತೀ ದೊಡ್ಡ ಸ್ತನಗಳನ್ನು ಹೊಂದಿದ ಮಹಿಳೆ ಎಂಬ ವಿಶ್ವ ದಾಖಲೆಗೆ ಶೈಲಾ ಪಾತ್ರಳಾಗಿದ್ದಳು.
ಸಂಬಂಧಿತ ಮಾಹಿತಿ ಹುಡುಕಿ