ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಾಹೋರ್‌ನಲ್ಲಿ ಮತ್ತೆ ಸ್ಫೋಟ; ಹಲವರಿಗೆ ಗಾಯ (Lahore | low intensity blasts | Pakistan | Garhi Shahu area)
Bookmark and Share Feedback Print
 
ಪೂರ್ವ ಪಾಕಿಸ್ತಾನದ ಲಾಹೋರ್‌ನಲ್ಲಿ ಶನಿವಾರ ಎರಡು ಲಘು ಬಾಂಬ್ ಸ್ಫೋಟಗೊಂದಿದ್ದು, ಹಲವರು ಗಾಯಗೊಂಡಿದ್ದಾರೆ. ಆದರೆ ಯಾರೂ ಸಾವನ್ನಪ್ಪಿದ ಬಗ್ಗೆ ವರದಿಗಳು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಬಾಂಬ್ ಸ್ಫೋಟಗೊಂಡದ್ದು ಗಾರ್ಹಿ ಸಾಹು ಪ್ರದೇಶದ ಸಿನಿಮಾ ಮಂದಿರದ ಸಮೀಪದ ಇಂಟರ್ನೆಟ್ ಕೆಫೆಯಲ್ಲಿ. ಸುಮಾರು ಸಂಜೆ ನಾಲ್ಕು ಗಂಟೆ ಹೊತ್ತಿಗೆ ಈ ಸ್ಫೋಟ ನಡೆದಿತ್ತು.

ಸರಕಾರದ ರಕ್ಷಣಾ ಸೇವಾ ವಿಭಾಗದ ವಕ್ತಾರ ಫಾಹಿಂ ಜಹನಾಜೇಬ್ ಘಟನೆ ಕುರಿತು ಮಾಹಿತಿ ನೀಡಿದ್ದು, ಅವರ ಪ್ರಕಾರ ಮೊದಲ ಸ್ಫೋಟದಲ್ಲಿ ಇಬ್ಬರು ಮಾತ್ರ ಗಾಯಗೊಂಡಿದ್ದಾರೆ.

ಸ್ಫೋಟದಿಂದ ಇಂಟರ್ನೆಟ್ ಕೆಫೆಗೆ ಭಾರೀ ಹಾನಿಯಾಗಿದೆ. ಇಲ್ಲಿಂದ ಸುಮಾರು 15 ಕಿಲೋ ಮೀಟರ್ ದೂರದಲ್ಲಿರುವ ಬೇಗಮ್ ಕೋಟ್‌ನಲ್ಲಿನ ಜ್ಯೂಸ್ ಅಂಗಡಿಯಲ್ಲಿ ಕೆಲವೇ ನಿಮಿಷಗಳ ಅಂತರದಲ್ಲಿ ಮತ್ತೊಂದು ಬಾಂಬ್ ಸ್ಫೋಟಗೊಂಡಿತ್ತು.

ಪೊಲೀಸರ ಪ್ರಕಾರ ಇಲ್ಲಿ ಸ್ಫೋಟಗೊಂಡಿರುವುದು ಬ್ಯಾಟರಿ. ರಕ್ಷಣಾ ಕಾರ್ಯಕರ್ತರು ಇಲ್ಲಿಗೂ ಧಾವಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ.

ಕೆಲವು ಪತ್ರಕರ್ತರಿಗೆ ಇಂದು ಲಾಹೋರ್‌ನಲ್ಲಿ ಮೂರು ಸ್ಫೋಟಗಳು ನಡೆಯುತ್ತವೆ ಎಂಬ ಬಗ್ಗೆ ಎಸ್ಎಂಎಸ್ ಸಂದೇಶಗಳು ಬಂದಿದ್ದವು ಎಂದು ಜಿಯೋ ಸುದ್ದಿ ವಾಹಿನಿ ಹೇಳಿತ್ತು. ಆದರೆ ಸಂದೇಶವನ್ನು ಕಳುಹಿಸಿದ್ದು ಯಾರು ಎಂದು ಹೇಳಿರಲಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ