ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಫೇಸ್‌ಬುಕ್ ವಿರುದ್ಧ ಜರ್ಮನಿ ಸಚಿವರಿಂದ ವಾಗ್ದಾಳಿ (German minister | Facebook | social network | Ilse Aigner)
Bookmark and Share Feedback Print
 
ಮೈಕ್ರೋ ಬ್ಲಾಗರ್ 'ಫೇಸ್‌ಬುಕ್' ವಿರುದ್ಧ ಕಿಡಿ ಕಾರಿರುವ ಜರ್ಮನಿ ಸಚಿವರೊಬ್ಬರು, ಈ ಸಾಮಾಜಿಕ ಸಂಪರ್ಕ ತಾಣವು ಖಾಸಗಿ ನೀತಿಗಳನ್ನು ಸರಿಯಾಗಿ ಅನುಸರಿಸದೇ ಇರುವ ಮೂಲಕ ಕಾನೂನನ್ನು ಉಲ್ಲಂಘಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಗ್ರಾಹಕರ ರಕ್ಷಣಾ ಸಚಿವೆ ಇಲ್ಸೆ ಏಗ್ನರ್ ಜರ್ಮನಿಯ 'ಫೋಕಸ್' ಎಂಬ ನಿಯತಕಾಲಿಕದ ಜತೆ ಮಾತನಾಡುತ್ತಾ, ಸಾಮಾಜಿಕ ಸಂಪರ್ಕತಾಣವನ್ನು ಬಳಸದೇ ಇರುವ ವ್ಯಕ್ತಿಗಳ ಖಾಸಗಿ ಮಾಹಿತಿಗಳನ್ನು ಶೇಖರಿಸಿಡುವುದನ್ನು ಸಂಸ್ಥೆಯು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪತ್ರಿಕೆಯ ಸೋಮವಾರದ ಆವೃತ್ತಿಯಲ್ಲಿ ಈ ವರದಿ ಪ್ರಕಟವಾಗಿದೆ. ಪ್ರಸ್ತುತ ಜರ್ಮನಿಯಲ್ಲಿರುವ ಕಾನೂನನ್ನು ಭಾಗಶಃವಾಗಿ ಫೇಸ್‌ಬುಕ್ ಉಲ್ಲಂಘಿಸುತ್ತಿದೆ ಎನ್ನುವುದು ನನಗೆ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಅವರು ಹೇಳಿದ್ದಾರೆ.

ಸಂಸ್ಥೆಯು ತನ್ನ ಬಳಕೆದಾರರ ದೂರವಾಣಿ ಸಂಖ್ಯೆಗಳಂತಹ ಮಾಹಿತಿಗಳನ್ನು ಕೇಳುತ್ತದೆ. ಈ ಮಾಹಿತಿಗಳನ್ನು ನೀಡಲು ಬಯಸದವರಿಂದಲೂ ಅವರ ಇಲೆಕ್ಟ್ರಾನಿಕ್ ಪರಿಕರಗಳಿಂದ ಅವರಿಗೆ ತಿಳಿಯದಂತೆ ಮಾಹಿತಿಗಳನ್ನು ಫೇಸ್‌ಬುಕ್ ಸಂಗ್ರಹಿಸುತ್ತದೆ. ಇದು ಸಲ್ಲದು. ಕಾನೂನನ್ನು ಸಂಸ್ಥೆಯು ಉಲ್ಲಂಘಿಸುತ್ತಿದೆ ಎಂದು ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ