ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಫಲಿತಾಂಶ ಆಧಾರಿತ ಮಾತುಕತೆಗಾಗಿ ಭಾರತ ಭೇಟಿ:ಖುರೇಷಿ (Indo-Pak talks | Qureshi | India)
Bookmark and Share Feedback Print
 
ಉಭಯ ದೇಶಗಳ ಸಮಸ್ಯೆಗಳ ಪರಿಹಾರಕ್ಕಾಗಿ ಅರ್ಥಪೂರ್ಣ ಮಾತುಕತೆ ಹಾಗೂ ಫಲಿತಾಂಶ ಆಧಾರಿತವಾದಲ್ಲಿ ಮಾತ್ರ ತಾವು ಮಾತುಕತೆಗಾಗಿ ಭಾರತಕ್ಕೆ ತೆರಳುವುದಾಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ ಹೇಳಿದ್ದಾರೆ.
\
ಕಾಲಹರಣಕ್ಕಾಗಿ ಭಾರತಕ್ಕೆ ತೆರಳಲು ನಾನು ಬಯಸುತ್ತಿಲ್ಲ. ಅರ್ಥಪೂರ್ಣ ಮಾತುಕತೆ ಹಾಗೂ ಫಲಿತಾಂಶ ಆಧಾರಿತವಾದಲ್ಲಿ ಮಾತ್ರ ತಾವು ಮಾತುಕತೆಗಾಗಿ ಭಾರತಕ್ಕೆ ತೆರಳುವುದಾಗಿ ಸಚಿವ ಖುರೇಶಿ ಸ್ಪಷ್ಟಪಡಿಸಿದ್ದಾರೆ.

ಭಾರತ ಸರಕಾರದ ಪ್ರಸ್ತುತ ಪರಿಸ್ಥಿತಿಯಲ್ಲಿ ತಾವು ಮಾತುಕತೆಗಾಗಿ ಭಾರತಕ್ಕೆ ತೆರಳಲು ಬಯಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಖುರೇಷಿ,ಮಾತುಕತೆಗಳು ಫಲಿತಾಂಶ ಆಧಾರಿತವಾಗಿರಬೇಕು ಎಂದರು.

ಭಾರತ ಭಯೋತ್ಪಾದನೆಗೆ ಮೊದಲ ಆದ್ಯತೆಯನ್ನು ನೀಡುತ್ತಿದೆ. ಪಾಕಿಸ್ತಾನ ಕೂಡಾ ಭಯೋತ್ಪಾದನೆಯಿಂದ ನರಳುತ್ತಿದೆ. ಮುಂಬೈ ದಾಳಿಯಲ್ಲಿ ಭಾಗಿಯಾಗ ಉಗ್ರರ ವಿರುದ್ಧ ಸೂಕ್ತ ಸಾಕ್ಷಾಧಾರಗಳನ್ನು ನೀಡಿದಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಖುರೇಷಿ ಭರವಸೆ ನೀಡಿದರು.

ಪಾಕಿಸ್ತಾನಕ್ಕೆ ಜಮ್ಮು ಕಾಶ್ಮೀರ ಕುರಿತಂತೆ ಕಳವಳವಾಗಿದೆ.ಉಭಯ ನಗರಗಳಲ್ಲಿ ಕರ್ಫ್ಯೂ ಹೇರಿ ನಿರಾಪರಾಧಿಗಳನ್ನು ಹತ್ಯೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಸಂಬಂಧಿತ ಮಾಹಿತಿ ಹುಡುಕಿ