ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನಕ್ಕೆ 500ಮಿ.ಡಾಲರ್ ನೆರವು: ಹಿಲರಿ ಕ್ಲಿಂಟನ್ (Pakistan | Hillary Clinton | Islamabad | $500 million | US)
Bookmark and Share Feedback Print
 
ನೀರು ಸಂಗ್ರಹಣೆ, ಇಂಧನ ಕ್ಷೇತ್ರ, ಆಹಾರ ರಫ್ತು ಹಾಗೂ ವೈದ್ಯಕೀಯ ಸೌಲಭ್ಯಗಳ ಅಭಿವೃದ್ದಿಗಾಗಿ 500ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚಿನ ಆರ್ಥಿಕ ನೆರವನ್ನು ಪಾಕಿಸ್ತಾನಕ್ಕೆ ನೀಡುವುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಸೋಮವಾರ ಘೋಷಿಸಿದ್ದಾರೆ.

ಆ ನಿಟ್ಟಿನಲ್ಲಿ ಪಂಚ ವಾರ್ಷಿಕ ಅಭಿವೃದ್ಧಿಗಾಗಿ ಮೊದಲ ಹಂತವಾಗಿ 7.5ಬಿಲಿಯನ್ ಡಾಲರ್ ನೀಡಲು ಅಮೆರಿಕ ಕಾಂಗ್ರೆಸ್ ಕಳೆದ ವರ್ಷ ಅನುಮೋದನೆ ನೀಡಿತ್ತು. ಪಾಕಿಸ್ತಾನ ಮತ್ತು ಅಮೆರಿಕ ನಡುವಿನ ಬಾಂಧವ್ಯ ಇನ್ನಷ್ಟು ವೃದ್ದಿಗೊಳಿಸುವ ಮುಖ್ಯ ಗುರಿಯೊಂದಿಗೆ ಈ ಆರ್ಥಿಕ ನೆರವು ನೀಡುತ್ತಿರುವುದಾಗಿ ಅವರು ಹೇಳಿದರು.

ಪಾಕಿಸ್ತಾನಿಯರು ಇನ್ನಷ್ಟು ದೃಢವಾದ ನೆಲೆಯಲ್ಲಿ ಅಭಿವೃದ್ದಿ ಕಾಣಬೇಕಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿರುವ ಕ್ಲಿಂಟನ್, ಆ ನಿಟ್ಟಿನಲ್ಲಿ ನಾವು ಪಾಕಿಸ್ತಾನದ ಜೊತೆ ಕೈ ಜೋಡಿಸಿ ಅಲ್ಲಿನ ಭಯೋತ್ಪಾದಕ ವಾತಾವರಣದಿಂದ ಅಭಿವೃದ್ದಿಯತ್ತ ಹೆಜ್ಜೆ ಹಾಕುವತ್ತ ಬದಲಾವಣೆ ತರಬೇಕಾದ ಅಗತ್ಯ ಇದೆ ಎಂದರು.

ಕ್ಲಿಂಟನ್ ಅವರು 2ನೇ ಬಾರಿಗೆ ಎರಡು ದಿನಗಳ ಕಾಲ ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ. ಅವರು ಸೋಮವಾರ ಸಂಜೆ ಕಾಬೂಲ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ