ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತ-ಪಾಕ್ ಮಾತುಕತೆ ಮುಂದುವರಿಯಬೇಕು: ಅಮೆರಿಕಾ (USA | Indo-Pak talks | Hillary Clinton | Shah Mahmood Qureshi)
Bookmark and Share Feedback Print
 
ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಮಾತುಕತೆ ಮಂದುವರಿಯಬೇಕು ಎಂದು ಅಮೆರಿಕಾ ಬಯಸುತ್ತಿದೆ. ಇದರಿಂದ ಇಸ್ಲಾಮಾಬಾದ್ ಮತ್ತು ನವದೆಹಲಿಗಳ ನಡುವಿನ ಪರಿಹಾರ ಕಾಣದೇ ಇರುವ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ ಎಂದು ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಹೇಳಿದ್ದಾರೆ.

ಅಮೆರಿಕಾ ಮತ್ತು ಪಾಕಿಸ್ತಾನಗಳ ನಡುವಿನ ವ್ಯೂಹಾತ್ಮಕ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಆಗಮಿಸಿರುವ ಕ್ಲಿಂಟನ್ ಅವರಿಗೆ ಜುಲೈ 15ರಂದು ಭಾರತ ಮತ್ತು ಪಾಕಿಸ್ತಾನಗಳ ವಿದೇಶಾಂಗ ಸಚಿವರುಗಳ ಮಾತುಕತೆಯನ್ನು ಸಂಕ್ಷಿಪ್ತವಾಗಿ ಪಾಕ್ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿ ನೇತೃತ್ವದ ನಿಯೋಗವು ವಿವರಿಸಿದ ಸಂದರ್ಭದಲ್ಲಿ ಅವರು ಮೇಲಿನಂತೆ ಹೇಳಿದ್ದಾರೆ ಎಂದು ರಾಯಭಾರ ಕಚೇರಿ ಮೂಲಗಳು ಹೇಳಿವೆ.

ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಮಾತುಕತೆ ಪ್ರಕ್ರಿಯೆಗಳು ಉಳಿದುಕೊಳ್ಳಬೇಕು ಎನ್ನುವುದನ್ನು ಅಮೆರಿಕಾ ಬಯಸುತ್ತಿದೆ ಎಂಬುದನ್ನು ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ ಎಂದು ಮೂಲವೊಂದು ಹೇಳಿದೆ.

ಇದೇ ಹೊತ್ತಿಗೆ ವಿದೇಶಾಂಗ ಸಚಿವರುಗಳು ಯಾವುದೇ ಮಹತ್ವದ ನಿಲುವುಗಳನ್ನು ತೆಗೆದುಕೊಳ್ಳಲು ಯಾಕೆ ಸಾಧ್ಯವಾಗಿಲ್ಲ ಎಂಬುದಕ್ಕೆ ಕಾರಣಗಳನ್ನೂ ಕ್ಲಿಂಟನ್ ಅವರಿಗೆ ಪಾಕಿಸ್ತಾನದ ನಿಯೋಗ ನೀಡಿದೆ.

ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ನೇತೃತ್ವದ ಭಾರತೀಯ ನಿಯೋಗವು ಕೇವಲ ಭಯೋತ್ಪಾದನೆಯನ್ನಷ್ಟೇ ಮಾತುಕತೆಗೆ ಮೀಸಲಿಟ್ಟಿತ್ತು, ಪಾಕಿಸ್ತಾನದ ಯಾವುದೇ ಕಳವಳಗಳಿಗೆ ಗಮನಹರಿಸುವ ಆಸಕ್ತಿಯನ್ನು ಹೊಂದಿರಲಿಲ್ಲ. ಅದು ಕಾಶ್ಮೀರ, ಸಿಯಾಚಿನ್ ಸೇರಿದಂತೆ ಇತರ ವಿಚಾರಗಳಲ್ಲಿ ಆಲಸ್ಯ ನೀತಿಯನ್ನು ಅನುಸರಿಸಿತ್ತು. ಈ ಕಾರಣದಿಂದ ಮಾತುಕತೆ ಹೆಚ್ಚಿನ ಫಲಿತಾಂಶ ತರಲಿಲ್ಲ ಎಂದು ಕ್ಲಿಂಟನ್‌ಗೆ ಪಾಕ್ ವಿವರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ