ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬುರ್ಖಾ ಮುಸ್ಲಿಂ ಮಹಿಳೆಯರ ಹಕ್ಕು: ಬ್ರಿಟೀಷ್ ಸಚಿವೆ (Veil empowers women | British minister | Muslim | Caroline Spelman)
Bookmark and Share Feedback Print
 
ಬುರ್ಖಾವನ್ನು ಸಾರ್ವಜನಿಕ ಸ್ಥಳಗಳಲ್ಲಿ ಧರಿಸುವುದನ್ನು ನಿಷೇಧಿಸಬೇಕು ಎಂಬ ಕೂಗು ಯೂರೋಪ್‌ನಾದ್ಯಂತ ಕೇಳಿ ಬರುತ್ತಿರುವ ಬೆನ್ನಿಗೆ ಇಸ್ಲಾಮಿಕ್ ಮುಖ ಪರದೆಯನ್ನು ಸಮರ್ಥಿಸಿಕೊಂಡಿರುವ ಬ್ರಿಟೀಷ್ ಸಚಿವೆಯೊಬ್ಬರು, ಇದು ಮುಸ್ಲಿಂ ಮಹಿಳೆಯರ ಹಕ್ಕು ಮತ್ತು ಅಧಿಕಾರವಾಗಿದೆ ಎಂದಿದ್ದಾರೆ.

ಮುಸ್ಲಿಂ ಮಹಿಳೆಯರು ಮುಖ ಮುಚ್ಚಿಕೊಳ್ಳುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ ಎಂದು ಪರಿಸರ ಕಾರ್ಯದರ್ಶಿ ಕೆರೊಲಿನ್ ಸ್ಪೆಲ್‌ಮನ್ ಹೇಳಿದ್ದಾರೆ.

ಬುರ್ಖಾ ನಿಷೇಧಕ್ಕೆ ಟೋರಿ ಪಕ್ಷದೊಳಗೆ ಬಂದ ಬೇಡಿಕೆಗಳನ್ನು ಪ್ರತಿಭಟಿಸಿದ್ದ ವಲಸೆ ಸಚಿವ ಡೆಮಿಯನ್ ಗ್ರೀನ್ ಹೇಳಿಕೆಯನ್ನು ಬೆಂಬಲಿಸಿ ಕೆರೊಲಿನ್ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಬುರ್ಖಾದ ಮೇಲೆ ನಿಷೇಧ ಹೇರುವುದು ಬ್ರಿಟೀಷ್ ವಿರೋಧಿ ನೀತಿಯಾಗಬಹುದು ಮತ್ತು ಸಮಾಜದಲ್ಲಿನ ಪರಸ್ಪರ ಸಹಿಷ್ಣುತೆ ಮತ್ತು ಗೌರವಗಳಿಗೆ ಕುಂದುಂಟಾಗಬಹುದು ಎಂದು ಗ್ರೀನ್ ಹೇಳಿದ್ದರು.

ಬುರ್ಖಾವನ್ನು ಧರಿಸುವುದು ಅಥವಾ ಧರಿಸದೇ ಇರುವುದು ಸ್ವತಃ ಒಬ್ಬಳು ಮಹಿಳೆ ನಿರ್ಧರಿಸಬೇಕಾದ ವಿಚಾರ. ನಾನು ಅಫಘಾನಿಸ್ತಾನದಲ್ಲಿಲ್ಲ. ಮುಖ ಪರದೆ ಧರಿಸುವುದು ಮುಸ್ಲಿಮರ ಸಂಸ್ಕೃತಿಯಾಗಿರಬಹುದು. ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ನಮ್ಮ ದೇಶದಲ್ಲೂ ಮುಸ್ಲಿಮರು ಹೊರಗಡೆ ಹೋಗುವಾಗ ಬುರ್ಖಾ ಧರಿಸಬೇಕೆಂದಿದ್ದರೆ, ಅದಕ್ಕೆ ಅವಕಾಶ ನೀಡಬೇಕು ಎಂದು ಕೆರೊಲಿನ್ ಅಭಿಪ್ರಾಯಪಟ್ಟಿದ್ದಾರೆ.

ಬ್ರಿಟನ್‌ನಲ್ಲಿ ಬುರ್ಖಾ ಅಥವಾ ಮುಖ ಪರದೆ ಧರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಶೇ.67ರಷ್ಟು ಮಂದಿ ಸಮೀಕ್ಷೆಯೊಂದರಲ್ಲಿ ಹೇಳಿಕೊಂಡಿರುವ ಹೊರತಾಗಿಯೂ ಇಂಗ್ಲೆಂಡ್ ಸಚಿವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

ಫ್ರಾನ್ಸ್ ಸಂಸತ್ತಿನ ಕೆಳಮನೆಯು ಬುರ್ಖಾ ನಿಷೇಧಕ್ಕೆ ತನ್ನ ಅಂಗೀಕಾರ ನೀಡಿದೆ. ಸ್ಪೇನ್ ಮತ್ತು ಬೆಲ್ಜಿಯಂಗಳು ಕೂಡ ಇದೇ ರೀತಿಯ ಕಾನೂನುಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಮುಂದಡಿಯಿಟ್ಟಿವೆ.
ಸಂಬಂಧಿತ ಮಾಹಿತಿ ಹುಡುಕಿ