ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನೇಪಾಳದ 3ರ ಬಾಲೆಗೆ ಗಿನ್ನೆಸ್‌ ರೆಕಾರ್ಡ್ ದಾಖಲೆ ಆಸೆ! (Nepali girl | Atithi K.C. | Guinness Book | album | songs)
Bookmark and Share Feedback Print
 
ಪ್ರತಿಭೆಗೆ ವಯಸ್ಸಿನ ಮಿತಿ ಇಲ್ಲ ಎಂಬುದಕ್ಕೆ ಈ ಬಾಲಕಿಯೇ ಸಾಕ್ಷಿ. ನೇಪಾಳದ ಮೂರು ವರ್ಷದ ಬಾಲಕಿಯೊಬ್ಬಳ ಮ್ಯೂಸಿಕ್ ಆಲ್ಬಂ ಹೊರಬಂದಿದ್ದು, ಆಕೆಯ ಹೆಸರನ್ನು ಗಿನ್ನೆಸ್ ರೆಕಾರ್ಡ್‌ನಲ್ಲಿ ದಾಖಲಿಸುವುದು ಆಕೆಯ ತಂದೆಯ ಕನಸಾಗಿದೆ.

ನೇಪಾಳದ ಅತಿಥಿ ಕೆ.ಸಿ. ಪುಟ್ಟ ಪ್ರತಿಭೆಯಾಗಿದ್ದಾಳೆ. ಅತಿಥಿ ತಂದೆ ಉದ್ದಬ್ ಕೆ.ಸಿ. ಮ್ಯೂಸಿಕ್ ಕಂಪೋಸರ್ ಆಗಿದ್ದಾರೆ. 'ತನ್ನ ಪುಟ್ಟ ಮಗಳು ಅತಿ ಚಿಕ್ಕ ವಯಸ್ಸಿನಲ್ಲಿಯೇ ಆಲ್ಬಂ ಹೊರತರುವ ಮೂಲಕ ವಿಶ್ವದಲ್ಲಿಯೇ ದಾಖಲೆ ಸ್ಥಾಪಿಸಿದ ಸಂಗೀಗಾರ್ತಿಯಾಗಿದ್ದಾಳೆ ಎಂದು ಶ್ಲಾಘಿಸಿದ್ದಾರೆ.

ಆ ನಿಟ್ಟಿನಲ್ಲಿ ಮಗಳ ಹೆಸರನ್ನು ಗಿನ್ನೆಸ್ ಬುಕ್‌ನಲ್ಲಿ ದಾಖಲಿಸುವ ಯೋಚನೆ ಹೊಂದಿರುವುದಾಗಿ ಉದ್ದಬ್ ವಿವರಿಸಿದ್ದಾರೆ. ಭಾನುವಾರ ನೆರೆದ ಮಾಧ್ಯಮ ಪ್ರತಿನಿಧಿಗಳ ಮುಂದೆ ದೇಶದ ರಾಷ್ಟ್ರಗೀತೆ ಸೇರಿದಂತೆ ಒಂಬತ್ತು ನೇಪಾಳಿ ಹಾಡುಗಳನ್ನ ಒಳಗೊಂಡ ಅತಿಥಿಯ ಹಾಡುಗಳ ಆಲ್ಬಂ ಅನ್ನು ಕಂಪೋಸರ್ ಅಂಬಾರ್ ಗುರುಂಗ್ ಬಿಡುಗಡೆಗೊಳಿಸಿದ್ದರು.

ಅತಿಥಿಯ ಆಲ್ಬಂ ಬಿಡುಗಡೆಯ ಸಂದರ್ಭದಲ್ಲಿ ತಂದೆಯ ಬೆಂಬಲದೊಂದಿಗೆ ಮೂರು ಹಾಡುಗಳನ್ನು ಹಾಡುವ ಮೂಲಕ ನೆರೆದಿದ್ದವರನ್ನು ಅಚ್ಚರಿಗೊಳಪಡಿಸಿ, ಶಬ್ಬಾಸ್‌ಗಿರಿ ಪಡೆದುಕೊಂಡಳು.

ಅತಿಥಿ ಆರು ತಿಂಗಳ ಹಸುಳೆಯಾಗಿದ್ದಾಳೆ ಮಾತನಾಡಲು ಆರಂಭಿಸಿದ್ದಳಂತೆ, ಆಕೆಯ ಅಕ್ಕ ಉಸ್ನಾ ನಾಲ್ಕು ವರ್ಷದವಳಿದ್ದಾಗ ಹಾಡಲು ಆರಂಭಿಸಿದ್ದನ್ನು ಅತಿಥಿ ಸೂಕ್ಷ್ಮವಾಗಿ ಗಮನಿಸುತ್ತಿದ್ದಳು. ನಂತರ ಆಕೆ ಕೂಡ ಹಾಡಲು ಆರಂಭಿಸಿದ್ದಳು. ಅಲ್ಲದೇ ಸಾರ್ವಜನಿಕ ಸಮಾರಂಭದಲ್ಲಿಯೂ ಹಾಡುವ ಮೂಲಕ ಸಂಗೀತವನ್ನು ಒಲಿಸಿಕೊಂಡಿದ್ದಳು ಎಂಬ ಅಭಿಮಾನದ ನುಡಿ ತಂದೆಯದ್ದು.

ಆ ನಿಟ್ಟಿನಲ್ಲಿ ಅತಿಥಿಯ ಹೆಸರನ್ನ ಗಿನ್ನೆಸ್ ರೆಕಾರ್ಡ್ ಬುಕ್‌ನಲ್ಲಿ ದಾಖಲಿಸಲು ಪ್ರಯತ್ನಿಸಲಾಗುವುದು ಎಂದು ಉದ್ದಬ್ ಈ ಸಂದರ್ಭದಲ್ಲಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ