ಇದು 'ಸೆಕ್ಸ್ ಎಂಡ್ ದಿ ಸಿಟಿ' ಟಿವಿ ಕಾರ್ಯಕ್ರಮದ ಪ್ರಭಾವ. ಅದರ ನಟಿ ಸಮಂತಾ ಮೋಡಿಗೆ ಮರುಳಾದ ಬ್ರಿಟೀಷ್ ಮಹಿಳೆಯೊಬ್ಬಳು ಸಾವಿರ ಪುರುಷರೊಂದಿಗೆ ಹಾಸಿಗೆ ಹಂಚಿಕೊಂಡಿದ್ದಾಳಂತೆ.
ಸಮಂತಾ ಪಾತ್ರದಿಂದ ಪ್ರಭಾವಿತಳಾದ ಕ್ರಿಸ್ಟಿನಾ ಸಾಂಡರ್ಸ್ ಎಂಬಾಕೆಯೇ ಈ ರೀತಿ ಸಹಸ್ರನಾಮಕ್ಕೆ ಮೊರೆ ಹೋದಾಕೆ.
ಸಮಂತಾ ಒಂದು ಪುರುಷನಿಂದ ಮತ್ತೊಂದು ಪುರುಷನಲ್ಲಿಗೆ ಹೋಗುತ್ತಾಳೆ, ಇದು ನನಗೆ ಖುಷಿ ತಂದಿತ್ತು. ಆಕೆಯಂತೆಯೇ ನಾನೂ ಆಗಬೇಕೆಂದು ಬಯಸಿದ್ದೆ. ಅದಕ್ಕಾಗಿ ಪ್ರತಿ ರಾತ್ರಿ ಪುರುಷರನ್ನು ಹುಡುಕುತ್ತಿದ್ದೆ ಎಂದು 'ನ್ಯೂಸ್ ಆಫ್ ದಿ ವರ್ಲ್ಡ್' ಪತ್ರಿಕೆಯಲ್ಲಿ ಸಾಂಡರ್ಸ್ ಹೇಳಿಕೆ ನೀಡಿದ್ದಾಳೆ.
ಸಮಂತಾಳಿಂದ ಸ್ಫೂರ್ತಿ ಪಡೆದುಕೊಂಡಿದ್ದ ಇಲ್ಲಿನ ಯುನಿವರ್ಸಿಟಿಯೊಂದರಲ್ಲಿ ಶಿಕ್ಷಣ ಪಡೆದುಕೊಂಡಿರುವ ಕಪ್ಪು ಮಹಿಳೆ ಆಕೆಯಂತೆಯೇ ಹಾಸಿಗೆಯಲ್ಲಿ ಸಾವಿರ ಪುರುಷರನ್ನು ಮೀರಿಸಬೇಕು ಎಂದು 10 ವರ್ಷಗಳ ಗುರಿಯನ್ನು ನಿಗದಿಪಡಿಸಿದ್ದಳು.
ಅದಕ್ಕಾಗಿ ಆಕೆ ವಿಶ್ವದ ಹಲವೆಡೆ ಪುರುಷರಿಗಾಗಿ ಹುಡುಗಾಟ ನಡೆಸಿದ್ದಾಳೆ. ಕನಿಷ್ಠ ವಾರಕ್ಕೊಬ್ಬ ಪುರುಷರಂತೆ ತನ್ನ ಗುರಿಗಾಗಿ ಬಳಸಿಕೊಂಡಿದ್ದಾಳೆ. ಕೆಲವು ಬಾರಿ ಮೂವರು ಜತೆ ಸೇರಿಕೊಂಡು ಮಂಚ ಹಂಚಿಕೊಂಡದ್ದೂ ಇದೆಯಂತೆ.
'ಸೆಕ್ಸ್ ಎಂಡ್ ದಿ ಸಿಟಿ' ಧಾರಾವಾಹಿಯಲ್ಲಿ ಸಮಂತಾ ಪಾತ್ರ ಮಾಡಿರುವ 53ರ ಹರೆಯದ ಕಿಮ್ ಕಾತ್ರಾಲ್ ಅವರಿಂದ ತಾನು ಸ್ಫೂರ್ತಿಗೊಂಡಿದ್ದೆ ಎಂದು ಆಕೆ ಹೇಳಿಕೊಂಡಿದ್ದಾಳೆ.