ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನೂತನ ಅಣು ವಿದ್ಯುತ್ ಸ್ಥಾವರ ನಿರ್ಮಿಸಲಿರುವ ಚೀನಾ (China | new nuclear power plant | Guangxi | Fangchengchang)
Bookmark and Share Feedback Print
 
ನೈಋತ್ಯ ಪ್ರಾಂತ್ಯ ಗುವಾನ್‌ಕ್ಸಿಯಲ್ಲಿ ನೂತನ ಅಣು ವಿದ್ಯುತ್ ಸ್ಥಾವರ ನಿರ್ಮಿಸಲು ಚೀನಾ ಮುಂದಾಗಿದ್ದು, ಪುನರ್ ನವೀಕರಣಗೊಳಿಸುವ ಇಂಧನ ಮೂಲಗಳನ್ನು ಹೆಚ್ಚಿಸುವ ನಿರ್ಧಾರಕ್ಕೆ ಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಗುವಾನ್‌ಕ್ಸಿಯಲ್ಲಿನ ಫಾಂಗ್ಚೆಂಗ್‌ಚಾಂಗ್ ನಗರದಲ್ಲಿ ಅಣು ವಿದ್ಯುತ್ ಸ್ಥಾವರ ನಿರ್ಮಾಣವಾಗಲಿದೆ. 1.08 ಗಿಗಾವ್ಯಾಟ್ ಚೀನಾ ನಿರ್ಮಿತ ರಿಯಾಕ್ಟರುಗಳನ್ನು ಅಳವಡಿಸಲು ಯೋಜನೆಯ ಮೊದಲ ಹಂತದಲ್ಲಿ ಚೀನಾವು 3.5 ಬಿಲಿಯನ್ ಡಾಲರುಗಳನ್ನು ವ್ಯಯಿಸಲಿದೆ ಎಂದು ಸ್ಥಳೀಯ ಸರಕಾರಿ ಅಧಿಕಾರಿಗಳ ಹೇಳಿಕೆಗಳನ್ನು ಉಲ್ಲೇಖಿಸಿ 'ಪ್ಯೂಪಲ್ಸ್ ಡೈಲಿ' ಪತ್ರಿಕೆ ವರದಿ ಮಾಡಿದೆ.

ದೇಶವು ಕಲ್ಲಿದ್ದಲು ಆಧರಿತ ಇಂಧನ ಮೂಲಗಳನ್ನು ಶೇ.70ರಷ್ಟು ಆಧರಿಸಿದ್ದು, ಇಂಗಾಲದ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ಕಡಿಮೆಗೊಳಿಸುವ ನಿಟ್ಟಿನಲ್ಲಿ ಮತ್ತು ಬೀಜಿಂಗ್ ಅಣು ಇಂಧನದಲ್ಲಿ ಹೂಡಿಕೆ ಮಾಡಲು ಮುಂದಾಗಿದೆ.

ವಿಶ್ವದ ಮೂರನೆ ಅತಿ ದೊಡ್ಡ ಅರ್ಥವ್ಯವಸ್ಥೆಯನ್ನು ಹೊಂದಿರುವ ಚೀನಾವು 2010ರೊಳಗೆ ಶೇ.10 ಹಾಗೂ 2020ರೊಳಗೆ ಶೇ.15ರಷ್ಟು ಇಂಧನವನ್ನು ಅಣು ಮೂಲದಿಂದ ಉತ್ಪಾದಿಸುವ ಗುರಿಯನ್ನು ಹೊಂದಿದೆ.

ಸಿಪಿಆರ್ 1000 ರಿಯಾಕ್ಟರುಗಳನ್ನು ಚೀನಾದ ಗುವಾಂಗ್‌ಡಂಗ್ ಅಣು ಇಂಧನ ಕಂಪನಿಯು ವಿದೇಶಿ ತಂತ್ರಜ್ಞಾನದೊಂದಿಗೆ ತಯಾರಿಸುತ್ತಿದೆ. ಈ ರಿಯಾಕ್ಟರುಗಳಿಗಾಗಿನ ಶೇ.80ರಷ್ಟು ಪರಿಕರಗಳನ್ನು ಚೀನಾದಲ್ಲೇ ತಯಾರಿಸಲಾಗಿದೆ ಎಂದು ಪತ್ರಿಕೆ ಹೇಳಿದೆ.

ಮೊದಲ ರಿಯಾಕ್ಟರ್ 2015ರಲ್ಲಿ ಹಾಗೂ ಎರಡನೇ ರಿಯಾಕ್ಟರ್ 2016ರಲ್ಲಿ ತನ್ನ ಕಾರ್ಯಾರಂಭ ಮಾಡುವ ನಿರೀಕ್ಷೆಗಳಿವೆ.
ಸಂಬಂಧಿತ ಮಾಹಿತಿ ಹುಡುಕಿ