ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಾಡೆನ್ ಎಲ್ಲಿದ್ದಾನೆಂದು ಪಾಕಿಸ್ತಾನಕ್ಕೆ ಗೊತ್ತಿದೆ: ಹಿಲರಿ (Pakistan | Osama bin Laden | Hillary Clinton | USA)
Bookmark and Share Feedback Print
 
ಒಸಾಮಾ ಬಿನ್ ಲಾಡೆನ್ ಸೆರೆ ಹಿಡಿಯದ ಹೊರತು ತಾನು ತೃಪ್ತನಾಗಲಾರೆ ಎಂದಿರುವ ಅಮೆರಿಕಾ, ಅಲ್‌ಖೈದಾ ನಾಯಕ ಎಲ್ಲಿ ಅಡಗಿದ್ದಾನೆಂದು ಪಾಕಿಸ್ತಾನದ ಸರಕಾರ, ಅದರಲ್ಲೂ ಅದರ ಬೇಹುಗಾರಿಕಾ ವ್ಯವಸ್ಥೆಗೆ ತಿಳಿದಿದೆ ಎಂದು ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಹೇಳಿದ್ದಾರೆ.

ಲಾಡೆನ್ ಸೆರೆ ಹಿಡಿಯುವ ಕಾಲ ಸನ್ನಿಹಿತವಾಗಿದೆ ಅಥವಾ ಅದಕ್ಕೊಂದು ಕಾಲ ನಿಗದಿಪಡಿಸಲು ನಾನು ಇಚ್ಛಿಸುವುದಿಲ್ಲ. ಈ ಹಿಂದೆ ಹೇಳಿದಂತೆ, ನಾವು ಆತನನ್ನು ಬಂಧಿಸುವ ಹತ್ತಿರದಲ್ಲಿದ್ದೇವೆ. ಆತನ ಸಂಘಟನೆಯ ಸಾಕಷ್ಟು ತರಬೇತುದಾರರನ್ನು, ಸಹಚರರನ್ನು ಮತ್ತು ಆರ್ಥಿಕ ಬೆಂಬಲಿಗರನ್ನು ಮುಗಿಸುವಲ್ಲಿ ನಾವು ಸಫಲರಾಗಿದ್ದೇವೆ ಎಂದು ಇಸ್ಲಾಮಾಬಾದ್‌ನಲ್ಲಿ 'ಫಾಕ್ಸ್ ನ್ಯೂಸ್' ವಾರ್ತಾವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹಿಲರಿ ತಿಳಿಸಿದ್ದಾರೆ.

ತಲೆ ಮರೆಸಿಕೊಂಡಿರುವ ಕ್ರೂರಿಯ ತೀರಾ ಸನಿಹದ್ಲಲೇ ಅಮೆರಿಕಾ ಮತ್ತು ಅಂತಾರಾಷ್ಟ್ರೀಯ ಪಡೆಗಳು ಸುತ್ತುತ್ತಿವೆ. ಆದರೆ ಆತ ನಮ್ಮ ಕೈಗೆ ಸಿಗುವವರೆಗೆ ನಾನು ಸಂತೃಪ್ತಳಾಗಲಾರೆ ಎಂದರು.

ಅಮೆರಿಕಾ ವಿದೇಶಾಂಗ ಕಾರ್ಯದರ್ಶಿಯವರ ಪ್ರಕಾರ ಪಾಕಿಸ್ತಾನ ಸರಕಾರದ ಕೆಲವು ವಿಭಾಗಗಳಿಗೆ ಒಸಾಮಾ ಬಿನ್ ಲಾಡೆನ್ ಅಡಗಿಕೊಂಡಿರುವ ಸ್ಥಳದ ಬಗ್ಗೆ ನಿಖರ ಮಾಹಿತಿಗಳಿವೆ.

ನನ್ನ ಪ್ರಕಾರ ಪಾಕಿಸ್ತಾನ ಸರಕಾರದಲ್ಲಿನ ಕೆಲವರಿಗೆ ಲಾಡೆನ್ ಎಲ್ಲಿದ್ದಾನೆಂಬುದು ತಿಳಿದಿದೆ. ಇದನ್ನು ಈ ಹಿಂದೆಯೇ ನಾನು ಹೇಳಿದ್ದೇನೆ. ಅಲ್‌ಖೈದಾ ನಾಯಕತ್ವದ ಕುರಿತು ಸಾಕಷ್ಟು ಸಹಕಾರವನ್ನು ನಾವು ಪಾಕ್ ಸರಕಾರದಿಂದ ಪಡೆದುಕೊಳ್ಳುವುದು ಕೂಡ ಅದೇ ಹೊತ್ತಿಗೆ ಪ್ರಾಮುಖ್ಯವಾಗಿರುತ್ತದೆ ಎಂದು ಹಿಲರಿ ತಿಳಿಸಿದರು.

ನಾವು ಬಿನ್ ಲಾಡೆನ್ ಅಥವಾ ಜವಾಹಿರಿಯವನ್ನು ಸೆರೆ ಹಿಡಿಯಲು ಸಾಧ್ಯವಾಗದೇ ಇದ್ದರೂ, ಅವರ ನಾಯಕತ್ವದ ಆಯಕಟ್ಟಿನ ಜಾಗಗಳಲ್ಲಿರುವ ವ್ಯಕ್ತಿಗಳನ್ನು ಬಂಧಿಸುವಲ್ಲಿ ಅಥವಾ ಕೊಂದು ಹಾಕುವಲ್ಲಿ ಸತತ ಯಶಸ್ಸು ಕಂಡಿದ್ದೇವೆ. ಇನ್ನುಳಿದಿರುವುದು ಲಾಡೆನ್ ಮತ್ತು ಆತನ ಪ್ರಮುಖ ಸಹಚರರು. ಅದನ್ನೂ ಶೀಘ್ರದಲ್ಲೇ ಸಾಧಿಸುತ್ತೇವೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ