ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಏಡ್ಸ್‌ನಿಂದ ಮಹಿಳೆಯರಿಗೆ ರಕ್ಷಣೆ; ವಿನೂತನ ಸಂಶೋಧನೆ (AIDS | Vaginal gel | HIV | UNAIDS)
Bookmark and Share Feedback Print
 
ಏಡ್ಸ್ ವೈರಸ್ ತಡೆಯುವ ಸಾಮರ್ಥ್ಯವನ್ನು ಹೊಂದಿರುವ ಜೆಲ್ ಒಂದನ್ನು ಮೊತ್ತ ಮೊದಲ ಬಾರಿಗೆ ಸಂಶೋಧಿಸಲಾಗಿದೆ. ತನ್ನ ಜತೆಗಾರನಿಗೆ ಎಚ್‌ಐವಿಯಿದ್ದರೂ ಲೈಂಗಿಕ ಸಂಬಂಧದಿಂದ ಅದು ಮಹಿಳೆಯ ದೇಹಕ್ಕೆ ಹರಡದಂತೆ ಈ ಜೆಲ್ ರಕ್ಷಣೆ ನೀಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ವರದಿಗಳು ಹೇಳಿವೆ.

ಇದು ಮತ್ತಷ್ಟು ಖಚಿತವಾಗಲು ಇನ್ನೊಂದು ಹಂತದ ಅಧ್ಯಯನದ ಅಗತ್ಯವಿದೆ. ಪ್ರಸಕ್ತ ಕಂಡು ಹಿಡಿಯಲಾಗಿರುವ ಮೈಕ್ರೋಬಿಸೈಡ್ ಜೆಲ್ ಈ ಹಂತದಲ್ಲಿ ಉತ್ಪಾದನೆಯಾಗಿ ಹೊರಗೆ ಬಂದಲ್ಲಿ ಅಮೆರಿಕಾದಂತಹ ರಾಷ್ಟ್ರಗಳಲ್ಲಿ ಅಂಗೀಕಾರ ಪಡೆದುಕೊಳ್ಳುವುದು ಕಷ್ಟ. ಆದರೆ ಇದರಲ್ಲಿ ಇನ್ನಷ್ಟು ಸುಧಾರಣೆ ಸಾಧ್ಯವಿದೆ ಎಂದು ವಿಜ್ಞಾನಿಗಳು ಆಶಾವಾದ ವ್ಯಕ್ತಪಡಿಸಿದ್ದಾರೆ.

ಮಹಿಳೆಯರಿಗೆ ನಾವು ಭರವಸೆಯನ್ನು ನೀಡುತ್ತಿದ್ದೇವೆ, ಈ ಜೆಲ್ ಸಾಂಕ್ರಾಮಿಕ ರೋಗವಾಗಿರುವ ಏಡ್ಸ್ ನಿಗೂಢತೆಯನ್ನು ಭೇದಿಸಲು ಸಹಕಾರ ನೀಡುತ್ತದೆ ಎಂದು ಎಚ್ಐವಿ ಸೋಂಕುಗಳ ಕುರಿತು ಅಧ್ಯಯನ ನಡೆಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆಯ ವಿಶ್ವಸಂಸ್ಥೆ ಏಡ್ಸ್ ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ದೇಶಕ ಮೈಕೆಲ್ ಸಿಡಿಬ್ ತಿಳಿಸಿದ್ದಾರೆ.

ಈ ನೂತನ ಔಷಧಿಯನ್ನು ಮಹಿಳೆಯ ತನ್ನ ಮರ್ಮಾಂಗಕ್ಕೆ ಹಚ್ಚಿಕೊಳ್ಳಬೇಕಾಗುತ್ತದೆ. ವರದಿಗಳ ಪ್ರಕಾರ ಇದರಿಂದಾಗಿ ಎಚ್ಐವಿ ಸೋಂಕು ಹರಡುವ ಪ್ರಮಾಣ ಇದರ ಬಳಕೆಯ ಒಂದು ವರ್ಷದ ನಂತರ ಶೇ.50 ಮತ್ತು ಎರಡೂವರೆ ವರ್ಷಗಳ ನಂತರ ಶೇ.39. ಆದರೆ ಅಮೆರಿಕಾದಲ್ಲಿ ಇದಕ್ಕೆ ಅಂಗೀಕಾರ ದೊರೆಯಬೇಕಾದರೆ ಶೇ.80ರಷ್ಟು ಪರಿಣಾಮಕಾರಿಯಾಗಿರಬೇಕಾಗುತ್ತದೆ.

ದಕ್ಷಿಣ ಆಫ್ರಿಕಾದಲ್ಲಿ 20ರ ಹರೆಯದ ಪ್ರತಿ ಮೂವರು ಯುವತಿಯರಲ್ಲಿ ಒಬ್ಬರಿಗೆ ಎಚ್‌ಐವಿ ಸಾಮಾನ್ಯವಾಗುತ್ತಿದ್ದು, ಈ ಜೆಲ್ ಬಳಕೆಯಿಂದಾಗಿ ಮುಂದಿನ ಎರಡು ದಶಕಗಳ ಅವಧಿಯಲ್ಲಿ 13 ಲಕ್ಷ ಸೋಂಕು ಹಾಗೂ 8.26 ಲಕ್ಷ ಸಾವುಗಳನ್ನು ತಡೆಯಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ