ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಿರಿಯಾ ಯೂನಿರ್ವಸಿಟಿಯಲ್ಲಿ ಬುರ್ಖಾ ಧಾರಣೆಗೆ ನಿಷೇಧ (universities | Syria | Islamic veil | Damascus | secular,)
Bookmark and Share Feedback Print
 
ಪಾಶ್ಚಾತ್ಯದ ಹಲವು ದೇಶಗಳಲ್ಲಿ ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಲು ನಿಷೇಧ ಹೇರಿರುವ ಬೆನ್ನಲ್ಲೇ, ಇದೀಗ ದೇಶದ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕಿಯರು ಬುರ್ಖಾ ತೊಡುವುದಕ್ಕೆ ಸಿರಿಯಾ ಕೂಡ ನಿಷೇಧ ಹೇರಿದೆ.

ಸಿರಿಯಾ ದೇಶದ ಜಾತ್ಯತೀತತೆ ಅನುಗುಣವಾಗಿ ನಿಷೇಧ ಹೇರಲಾಗಿದೆ ಎಂದು ಸರಕಾರ ಸ್ಪಷ್ಟಪಡಿಸಿದೆ. ಯುರೋಪ್ ದೇಶದ ಪ್ರಜಾಪ್ರಭುತ್ವಕ್ಕೆ ಬುರ್ಖಾ ಧಾರಣೆ ಸಾಕಷ್ಟು ತೊಂದರೆಗಳಿಗೆ ಎಡೆಮಾಡಿಕೊಡುತ್ತಿದೆ. ಅಲ್ಲದೇ ಬುರ್ಖಾ ಧಾರಣೆಯಿಂದ ವ್ಯಕ್ತಿಯನ್ನು ಪೂರ್ಣ ಪ್ರಮಾಣದಲ್ಲಿ ಗುರುತಿಸಲು ಅಸಾಧ್ಯವಾಗುತ್ತದೆ. ಆ ಹಿನ್ನೆಲೆಯಲ್ಲಿ ನಿಷೇಧಕ್ಕೆ ಸಿರಿಯಾ ಕೂಡ ಮುಂದಾಗಿರುವುದಾಗಿ ಹೇಳಿದೆ.

ಆ ನಿಟ್ಟಿನಲ್ಲಿ ಮುಸ್ಲಿಮ್ ಯುವತಿಯರು ಬುರ್ಖಾ ಧರಿಸದಂತೆ ಎಲ್ಲಾ ಯೂನಿರ್ವಸಿಟಿಗಳಿಗೆ ನಿರ್ದೇಶನ ನೀಡುವುದಾಗಿ ಸಿರಿಯಾ ಸರಕಾರದ ಅಧಿಕಾರಿಗಳು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಈ ಆದೇಶ ಸರಕಾರಿ ಮತ್ತು ಖಾಸಗಿ ಯೂನಿರ್ವಸಿಟಿ ವಿದ್ಯಾರ್ಥಿನಿಯರಿಗೆ ಅನ್ವಯವಾಗಲಿದೆ. ಅಲ್ಲದೇ ಇದರ ಉದ್ದೇಶ ಸಿರಿಯಾದ ಜಾತ್ಯತೀತತೆಯನ್ನು ರಕ್ಷಿಸುವುದೇ ಪ್ರಮುಖವಾಗಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ