ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಾಡೆನ್ ಪಾಕ್‌ನಲ್ಲಿ ಇದ್ರೆ ಪುರಾವೆ ಕೊಡಿ: ಅಮೆರಿಕಕ್ಕೆ ಪಾಕ್ (Osama | Mullah Omar | Taliban | Yousuf Raza Gilani | Hillary Clinton)
Bookmark and Share Feedback Print
 
ಅಲ್ ಖಾಯಿದಾದ ವರಿಷ್ಠ ಒಸಾಮಾ ಬಿನ್ ಲಾಡೆನ್ ಅಥವಾ ಅಫ್ಘಾನ್ ತಾಲಿಬಾನ್ ಮುಖಂಡ ಮುಲ್ಲಾ ಓಮರ್ ಈಗಲೂ ಪಾಕಿಸ್ತಾನದಲ್ಲಿಯೇ ನೆಲೆಸಿದ್ದಾರೆ ಎಂಬ ಅಮೆರಿಕದ ಶಂಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪಾಕ್ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ, ಆರೋಪವನ್ನು ಸಾಬೀತುಪಡಿಸುವಂತೆ ಸವಾಲು ಹಾಕಿದ್ದಾರೆ.

ಅಫ್ಘಾನಿಸ್ತಾನದಲ್ಲಿ ನಡೆದ ಶೃಂಗಸಭೆಗೆ ಆಗಮಿಸಿದ್ದ ಸಂದರ್ಭದಲ್ಲಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್, ಲಾಡೆನ್ ಮತ್ತು ಓಮರ್ ಈಗಲೂ ಪಾಕಿಸ್ತಾನದಲ್ಲಿಯೇ ಆಶ್ರಯಪಡೆದಿದ್ದಾರೆಂದು ಬಲವಾಗಿ ಶಂಕೆ ವ್ಯಕ್ತಪಡಿಸಿದ್ದರು.

ಅದಕ್ಕೆ ಪ್ರತಿಕ್ರಿಯಿಸಿರುವ ಗಿಲಾನಿ, ಒಸಾಮಾ ಈಗಲೂ ಪಾಕಿಸ್ತಾನದಲ್ಲಿ ಇದ್ದಾನೆ ಎಂಬ ಬಗ್ಗೆ ಅಮೆರಿಕ ಸೂಕ್ತವಾದ ಮತ್ತು ಖಚಿತವಾದ ಮಾಹಿತಿಯನ್ನು ನೀಡಲಿ ಎಂದು ತಿರುಗೇಟು ನೀಡಿದ್ದಾರೆ.

ಆದರೆ ಲಾಡೆನ್ ಕುರಿತಂತೆ ಹಿಲರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯಾವುದೇ ಚರ್ಚೆ ನಡೆಸಿಲ್ಲ ಎಂದರು. ಆದರೆ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದಲ್ಲಿ ಠಿಕಾಣಿ ಹೂಡಿದ್ದಾನೆ ಎಂಬ ಆರೋಪದ ಬಗ್ಗೆ ಅಮೆರಿಕ ಸೂಕ್ತ ಪುರಾವೆ ನೀಡಲಿ ಎಂದು ಸವಾಲು ಹಾಕಿದ್ದಾರೆ.

ಒಂದು ವೇಳೆ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದಲ್ಲಿ ಇರುವ ಬಗ್ಗೆ ಅಮೆರಿಕವಾಗಲಿ ಅಥವಾ ಯಾವುದೇ ದೇಶದ ಬಳಿ ಸೂಕ್ತ ಸಾಕ್ಷ್ಯಾಧಾರ ಇದ್ದರೆ ಅದನ್ನು ಪಾಕಿಸ್ತಾನ ಸರಕಾರದ ಜೊತೆ ಹಂಚಿಕೊಳ್ಳಲಿ ಎಂದು ಈ ಸಂದರ್ಭದಲ್ಲಿ ಸಲಹೆ ನೀಡಿದರು.

ಅವರು ಮಾಧ್ಯಮದವರೊಂದಿಗೆ ಸಂವಾದ ನಡೆಸುತ್ತಿದ್ದ ಸಂದರ್ಭದಲ್ಲಿ, ಒಸಾಮಾ ಮತ್ತು ಓಮರ್ ಪಾಕಿಸ್ತಾನದಲ್ಲಿ ಅಡಗಿದ್ದಾರೆಂಬ ಹಿಲರಿ ಆರೋಪ ಕುರಿತಂತೆ ಪ್ರಶ್ನಿಸಿದಾಗ ಈ ರೀತಿ ಪ್ರತಿಕ್ರಿಯೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ