ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಸ್ಟ್ರೇಲಿಯಾದಲ್ಲಿ ನೇಪಾಳ ರಾಜವಂಶಜನಿಂದ ಅತ್ಯಾಚಾರ (Nepalese royal | woman | Amit Hamal | sexual relations)
Bookmark and Share Feedback Print
 
ಭಾರತೀಯ ಉಪಹಾರವನ್ನು ಕೊಡಲೆಂದು ಆಸ್ಟ್ರೇಲಿಯಾದ ಮಹಿಳೆಯೊಬ್ಬಳ ಕೊಠಡಿಗೆ ತೆರಳಿದ್ದ ನೇಪಾಳದ ರಾಜ ವಂಶಜನೊಬ್ಬ ಆಕೆಯನ್ನು ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದ್ದು, ಪ್ರಕರಣವೀಗ ನ್ಯಾಯಾಲಯದಲ್ಲಿದೆ.

21ರ ಹರೆಯದ ಅಮಿತ್ ಹಮಾಲ್ ಎಂಬಾತನೇ ಈ ಆರೋಪಿ. ಜುಲೈ 16ರಂದು ಮಹಿಳೆಯ ಸಮ್ಮತಿಯಿಲ್ಲದೆ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ ಆರೋಪವನ್ನು ಹಮಾಲ್ ಮೇಲೆ ಹೊರಿಸಲಾಗಿದೆ.

ಆರೋಪಿಗೆ ಜಾಮೀನು ನಿರಾಕರಿಸಲಾಗಿದೆ. ಪ್ರಕರಣದ ವಿಚಾರಣೆಯನ್ನು ಜುಲೈ 29ಕ್ಕೆ ಮುಂದೂಡಲಾಗಿದೆ ಎಂದು ಆಸ್ಟ್ರೇಲಿಯಾ ಮಾಧ್ಯಮಗಳು ವರದಿ ಮಾಡಿವೆ.

ಆದರೆ ಹಮಾಲ್ ವಕೀಲರ ಪ್ರಕಾರ ಯುವಕ ನೇಪಾಳದ ರಾಜ ವಂಶಕ್ಕೆ ಸೇರಿರುವುದು ಹೌದು, ಆದರೆ ದೈಹಿಕ ಸಂಬಂಧ ಇಬ್ಬರ ಒಪ್ಪಿಗೆಯ ನಂತರವಷ್ಟೇ ನಡೆದಿತ್ತು.

ಘಟನೆಯ ದಿನ 'ಸಿಡ್ನಿ ಹೌಸ್'ಗೆ ಉಪಹಾರ ಕೊಡಲೆಂದು ಹೋಗಿದ್ದ ಹಮಾಲ್ ಬಾಗಿಲ ಕರೆಗಂಟೆಯನ್ನು ಒತ್ತಿದ್ದ ಮತ್ತು ದೂರವಾಣಿ ಕರೆಯನ್ನೂ ಮಾಡಿದ್ದ. ಯಾವುದೇ ಪ್ರತಿಕ್ರಿಯೆ ಬರದೇ ಇದ್ದಾಗ ಒಳಗೆ ಹೋಗಿದ್ದಾನೆ. ಆಗ ವಿಶ್ರಾಂತಿ ಕೋಣೆಯಲ್ಲಿ ಪುರುಷನೊಬ್ಬ ಮಲಗಿದ್ದ. ಆದರೆ ಆತನನ್ನು ಹಮಾಲ್ ಎಬ್ಬಿಸಿರಲಿಲ್ಲ ಎಂದು ವಕೀಲರು ವಿವರಣೆ ನೀಡಿದ್ದಾರೆ.

ನಂತರ ಹಮಾಲ್ ಮತ್ತೊಂದು ಕೊಠಡಿಗೆ ಹೋದಾಗ, ಅಲ್ಲಿ 44ರ ಹರೆಯದ ಮಹಿಳೆಯೊಬ್ಬರು ಮಲಗಿದ್ದರು. ಆಕೆ ಉದ್ರೇಕಗೊಂಡಿದ್ದರಿಂದ ಇಬ್ಬರೂ ಈ ಸಂದರ್ಭದಲ್ಲಿ ಪರಸ್ಪರ ಸಮ್ಮತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದಾರೆ. ಹಾಗಾಗಿ ಇಲ್ಲಿ ಮಾಡಲಾಗಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ಆರೋಪಿ ಪರ ವಕೀಲರು ವಾದಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ