ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನ್ಯೂಜಿಲ್ಯಾಂಡ್ ಪ್ರಧಾನಿಗೆ ಬೆದರಿಕೆ ಹಾಕಿ ಪೊಲೀಸ್ ಅತಿಥಿಯಾದ! (Canterbury | Prime Minister | New Zealand | John Key)
Bookmark and Share Feedback Print
 
ನ್ಯೂಜಿಲ್ಯಾಂಡ್ ಪ್ರಧಾನಮಂತ್ರಿ ಜಾನ್ ಕೇ ಅವರನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡಿ ಕಳುಹಿಸಿರುವ ಫ್ಯಾಕ್ಸ್ ಅನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದು, ಬೆದರಿಕೆ ಹಾಕಿದ್ದ ವ್ಯಕ್ತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಪ್ರಧಾನಿಗೆ ಬೆದರಿಕೆ ಹಾಕಿದ ವ್ಯಕ್ತಿಯನ್ನು ಉತ್ತರ ಕ್ಯಾನ್‌ಟರ್‌ಬರ್ರಿಯ ರೈತ ಮಾರ್ಕ್ ಫೆಯಾರಿ (53) ಎಂದು ಗುರುತಿಸಲಾಗಿದೆ. ಆತ ಕ್ರಿಸ್ಟ್‌ಚರ್ಚ್ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಧಾನಿಗೆ ಬೆದರಿಕೆ ಪತ್ರ ಬರೆದಿರುವುದನ್ನು ಒಪ್ಪಿಕೊಂಡಿದ್ದ. ಆ ನಿಟ್ಟಿನಲ್ಲಿ ಕೋರ್ಟ್ ಆತನಿಗೆ 20ಸಾವಿರ ಅಮೆರಿಕನ್ ಡಾಲರ್ ದಂಡ ವಿಧಿಸಿದೆ.

ಪ್ರಧಾನಿಗೆ ಬೆದರಿಕೆ ಒಡ್ಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಎಂಟು ದಿನಗಳ ಕಾಲ ತೀವ್ರವಾಗಿ ಮಾರ್ಕ್‌ನನ್ನು ಪೊಲೀಸರು ವಿಚಾರಣೆ ಒಳಪಡಿಸಿದ್ದರು. ಇದೀಗ ಜೈಲುವಾಸಕ್ಕೆ ಗುರಿಯಾಗಿರುವ ಮಾರ್ಕ್ ತಾನು ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.

ನಾನು ಈ ಭ್ರಷ್ಟ ಸರಕಾರದ ಆಹಾರ ಮತ್ತು ನೀರನ್ನು ಕುಡಿಯಲಾರೆ ಎಂದು ಮಾರ್ಕ್ ಹೇಳಿರುವುದಾಗಿ ನ್ಯೂಜಿಲ್ಯಾಂಡ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ. ತಮ್ಮ ಕುಟುಂಬದ ದೀರ್ಘ ಕಾಲದ ಜಮೀನು ವಿವಾದದಲ್ಲಿ ತನಗೆ ಅನ್ಯಾಯವಾಗಿದೆ ಎಂದು ಅಸಮಾಧಾನಗೊಂಡು ಪ್ರಧಾನಿಗೆ ಬೆದರಿಕೆ ಪತ್ರ ಹಾಕಿದ್ದ.
ಸಂಬಂಧಿತ ಮಾಹಿತಿ ಹುಡುಕಿ