ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಫ್ಘಾನ್ ಮತ್ತೊಂದು ಹೊಸ ವಿಯೆಟ್ನಾಂ ಆಗಲಿದೆ: ಇರಾನ್ (Afghanistan | Geneva | Vietnam | Iran speaker | Parliament)
Bookmark and Share Feedback Print
 
ಅಫ್ಘಾನಿಸ್ತಾನವನ್ನು ಮತ್ತೊಂದು ಹೊಸ ವಿಯೆಟ್ನಾಂ ಮಾಡಲು ಅಮೆರಿಕ ಹೊರಟಿದೆ ಎಂದು ಇರಾನ್ ಸಂಸತ್ ಸ್ಪೀಕರ್ ಅಲಿ ಲಾರಿಜಿಯಾನಿ ಸಂದರ್ಶನವೊಂದರಲ್ಲಿ ಗಂಭೀರವಾಗಿ ಆರೋಪಿಸಿದ್ದಾರೆ.

ವಿಯೆಟ್ನಾಂನಲ್ಲಿ ಅಮೆರಿಕ ಯಾವ ರೀತಿ ಯಶಸ್ಸನ್ನು ಸಾಧಿಸಿದೆಯೋ ಅದೇ ತಂತ್ರವನ್ನು ಅಫ್ಘಾನಿಸ್ತಾನದಲ್ಲಿಯೂ ಮಾಡುತ್ತಿದೆ ಎಂದು ಫ್ರೆಂಚ್ ಭಾಷೆಯ ಸ್ವಿಸ್ ಟೆಲಿವಿಷನ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕೆಲವು ವರ್ಷಗಳ ಹಿಂದೆ ಸೋವಿಯತ್ ಒಕ್ಕೂಟ ಕೂಡ ಇಂತಹದ್ದೇ ತಪ್ಪನ್ನು ಮಾಡಿತ್ತು. ಇದರಿಂದಾಗಿ ಹಲವಾರು ಜನರು ಸಾವನ್ನಪ್ಪಿದ್ದರು. ಕೊನೆಗೆ ಎಲ್ಲರನ್ನೂ ಹೊರಹಾಕಲಾಗಿತ್ತು. ಹಾಗೆಯೇ ಇತಿಹಾಸ ಮರುಕಳಿಸುತ್ತಿದೆ ಎಂದರು.

ಅಲ್ಲದೇ ಅಮೆರಿಕ ಮತ್ತು ಜನರಲ್ ಡೇವಿಡ್ ಪೀಟರ್ಸ್ ಅಫ್ಘಾನಿಸ್ತಾನದಲ್ಲಿ ಇರುವ ಮೂಲಕ ಭಯೋತ್ಪಾದನೆ ಇನ್ನಷ್ಟು ಹೆಚ್ಚಳವಾಗಲಿದೆ. ಇದು ಅಮೆರಿಕಕ್ಕೆ ತೊಂದರೆಯಾಗಲಿದೆ ಎಂದು ಬ್ರಿಗೇಡಿಯರ್ ಜನರಲ್ ಮಾಸ್ಸುಂಡ್ ಜಾಜಾಯೆರಿ ದೂರಿರುವುದಾಗಿ ವೆಬ್‌ಸೈಟ್ ವರದಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ