ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಐಎಸ್‌ಐ-ತಾಲಿಬಾನ್ ಸಂಬಂಧ ಹೌದು: ಅಮೆರಿಕಾ (USA | ISI-Taliban links | India | Pakistan)
Bookmark and Share Feedback Print
 
ಭಯೋತ್ಪಾದನೆ ವಿಚಾರದ ಕುರಿತು ಮಾತುಕತೆಗೆ ಕುಳಿತಿದ್ದ ಭಾರತ ಮತ್ತು ಪಾಕಿಸ್ತಾನಗಳು ಮುನಿಸಿಕೊಂಡ ನಂತರ ಹೇಳಿಕೆ ನೀಡಿರುವ ಅಮೆರಿಕಾ, ಪಾಕ್ ಬೇಹುಗಾರಿಕಾ ವಿಭಾಗ ಐಎಸ್ಐ ಮತ್ತು ತಾಲಿಬಾನ್ ಸಂಬಂಧ ಹೊಂದಿರುವುದು ಹೌದು ಎಂದು ಒಪ್ಪಿಕೊಂಡಿದೆ.

ಐಎಸ್ಐ ಮತ್ತು ತಾಲಿಬಾನ್ ನಡುವಿನ ಸಂಬಂಧ ಒಂದು ಸಮಸ್ಯೆ. ಈ ಕುರಿತು ಪಾಕಿಸ್ತಾನ ಸರಕಾರ ಮತ್ತು ಮಿಲಿಟರಿಯ ಜತೆ ಅಮೆರಿಕಾ ಮಾತುಕತೆ ನಡೆಸಿದೆ ಎಂದು ಪಾಕಿಸ್ತಾನಕ್ಕಾಗಿನ ಅಮೆರಿಕಾದ ವಿಶೇಷ ಪ್ರತಿನಿಧಿ ರಿಚರ್ಡ್ ಹಾಲ್ಬೂರ್ಕ್ ತಿಳಿಸಿದ್ದಾರೆ.

ಭಯೋತ್ಪಾದಕ ಸಂಘಟನೆಗಳ ಜತೆ ಪಾಕಿಸ್ತಾನದ ಬೇಹುಗಾರಿಕಾ ವಿಭಾಗ ಐಎಸ್ಐ ಸಂಬಂಧ ಹೊಂದಿದೆ ಎಂದು ಇತ್ತೀಚಿನ ದಿನಗಳಲ್ಲಿ ಭಾರತ ತನ್ನ ಕಳವಳ ವ್ಯಕ್ತಪಡಿಸುತ್ತಾ ಬಂದಿದ್ದು, ಇದೀಗ ಅಮೆರಿಕಾ ಅದನ್ನು ಖಚಿತಪಡಿಸಿದೆ.

ಪಾಕ್ ಮೂಲದ ಹಖಾನಿ ಜಾಲ ಮತ್ತು ಲಷ್ಕರ್ ಇ ತೋಯ್ಬಾಗಳು 2008ರ ಮುಂಬೈ ದಾಳಿಯಲ್ಲಿ ಪಾಲ್ಗೊಂಡಿರುವ ಆರೋಪಗಳ ಬಗ್ಗೆ ಏನು ಹೇಳುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಹಾಲ್ಬೂರ್ಕ್, ಭಯೋತ್ಪಾದಕ ಸಂಘಟನೆಗಳ ಪ್ರಮುಖ ಉದ್ದೇಶ ಪಾಶ್ಚಾತ್ಯ ನಾಗರಿಕತೆಯನ್ನು ಇಲ್ಲದಂತಾಗಿಸುವುದು ಹಾಗೂ ದೆಹಲಿ ಮತ್ತು ಇಸ್ಲಾಮಾಬಾದ್ ನಡುವೆ ಸಮಸ್ಯೆಗಳನ್ನು ಹುಟ್ಟು ಹಾಕುವುದು ಎಂದರು.

ಅಲ್‌ಖೈದಾ ಭಯೋತ್ಪಾದನ ಸಂಘಟನೆಯಷ್ಟೇ ಬೆದರಿಕೆ ಲಷ್ಕರ್ ಇ ತೋಯ್ಬಾದಿಂದಲೂ ಇದೆ. ಈ ಹಿಂದಿಗಿಂತಲೂ ಹೆಚ್ಚು ನಿಕಟತೆಯಿಂದ ಲಷ್ಕರ್, ಅಲ್‌ಖೈದಾ ಮತ್ತು ತಾಲಿಬಾನ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅಮೆರಿಕಾ ಪ್ರತಿನಿಧಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ