ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪ್ರೇತೋಚ್ಛಾಟನೆ ಹೆಸರಲ್ಲಿ ಮಲೇಷಿಯಾ ಬಾಲಕಿಗೆ ಚಿತ್ರಹಿಂಸೆ (Malaysian girl | exorcism ritual | Kuala Lumpur | Malaysian court)
Bookmark and Share Feedback Print
 
ಪ್ರೇತೋಚ್ಛಾಟನೆ ಹೆಸರಿನಲ್ಲಿ ಕಳೆದ ಒಂದು ತಿಂಗಳಿನಿಂದ ಚಿತ್ರಹಿಂಸೆ ಅನುಭವಿಸುತ್ತಿದ್ದ 10ರ ಹರೆಯದ ಮಲೇಷಿಯಾ ಬಾಲಕಿಯೊಬ್ಬಳು ಇದೀಗ ಪಾರಾಗಿದ್ದಾಳೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಕಾಲು ಮತ್ತು ಕೈಗಳಿಗೆ ಹಾಕಿದ್ದ ಬೇಡಿಯನ್ನು ಬಿಚ್ಚಿಕೊಂಡು ತಪ್ಪಿಸಿಕೊಂಡು ಬಂದಿರುವ ಬಾಲಕಿಯನ್ನು ಇದೀಗ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಎರಡೂ ಕೈಗಳಲ್ಲಿ ಸುಟ್ಟ ಗಾಯಗಳಾಗಿವೆ, ಮುಖದಲ್ಲಿ ಜಜ್ಜಿದ ಗಾಯಗಳಾಗಿವೆ, ಮಣಿಕಟ್ಟುಗಳು ಊದಿಕೊಂಡಿವೆ, ಪಕ್ಕೆಲುಬುಗಳು ಮುರಿದಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಕರಣ ಹೊರಗೆ ಬರುತ್ತಿದ್ದಂತೆ ಬಾಲಕಿಯ ಸಂಬಂಧಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮಲೇಷಿಯಾದ ದಕ್ಷಿಣ ಪ್ರಾಂತ್ಯ ಜೋಹರ್ ಎಂಬಲ್ಲಿ ಈತನ ಜತೆ ಬಾಲಕಿ ವಾಸಿಸುತ್ತಿದ್ದಳು ಎಂದು ವರದಿಗಳು ಹೇಳಿವೆ.

ತನ್ನ ತಂದೆ ಸಾವನ್ನಪ್ಪಿದ ನಂತರ ಬಾಲಕಿಯನ್ನು ಶಂಕಿತಳಾಗಿ ನೋಡಲಾಗುತ್ತಿತ್ತು. ಈಕೆ ಅಪಶಕುನವೆಂದು ಭಾವಿಸಲಾಗಿತ್ತು. ಇದೇ ಹಿನ್ನೆಲೆಯಲ್ಲಿ ಆಕೆಗೆ ಧಾರ್ಮಿಕ ವಿಧಿವಿಧಾನಗಳ ಮೂಲಕ ಚಿತ್ರಹಿಂಸೆ ನೀಡಲಾಗುತ್ತಿತ್ತು.

ಪೊಲೀಸರ ಪ್ರಕಾರ ಆಕೆಯನ್ನು ತಿಂಗಳುಗಳ ಕಾಲ ಥಳಿಸುವುದು, ಬೆಂಕಿಯ ಮೂಲಕ ಹಿಂಸಿಸುವುದನ್ನು ನಡೆಸಿಕೊಂಡು ಬರಲಾಗಿತ್ತು. ಅದಕ್ಕೆ ಕಾರಣ ಈಕೆ ಅಶುಭಕಾರಕ ಎಂಬುದೇ ಆಗಿತ್ತು ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ