ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರನ್ನೂ ಈಗಲೂ ಹೆಚ್ಚಿನ ಸಂಖ್ಯೆ ಅಮೆರಿಕನ್ನರು ಇಷ್ಟ ಪಡುತ್ತಿದ್ದಾರೆ ಎಂದು ನೂತನ ಗ್ಯಾಲ್ಲೋಪ್ ಸಮೀಕ್ಷೆ ಬಹಿರಂಗಪಡಿಸಿದೆ. ಹಾಲಿ ಅಧ್ಯಕ್ಷ ಬರಾಕ್ ಒಬಾಮಗಿಂತ ಕ್ಲಿಂಟನ್ ಹೆಚ್ಚು ಜನಪ್ರಿಯ ಎಂದು ಹೇಳಿದೆ.
ಬಿಲ್ ಕ್ಲಿಂಟನ್ ಪರವಾಗಿ ಶೇ.61ರಷ್ಟು ಅಮೆರಿಕನ್ನರು ಮತ ಚಲಾಯಿಸಿದ್ದರೆ, ಬರಾಕ್ ಒಬಾಮಾ ಶೇ. 52 ಮತ್ತು ಜಾರ್ಜ್ ಡಬ್ಲ್ಯು ಬುಷ್ ಶೇ.45ರಷ್ಟು ಜನ ಮತ ಚಲಾಯಿಸಿರುವುದಾಗಿ ಅಭಿಪ್ರಾಯ ಸಮೀಕ್ಷೆ ವಿವರಿಸಿದೆ.
ಸಮೀಕ್ಷೆಯ ಅಭಿಪ್ರಾಯದಂತೆ ಜನರು ಕ್ಲಿಂಟನ್ ಅವರ ಡೆಮೋಕ್ರಟ್ ಪಕ್ಷವನ್ನೇ ಹೆಚ್ಚು ಇಷ್ಟಪಡುತ್ತಿದ್ದಾರೆಂಬುದರ ಪರೋಕ್ಷ ಸೂಚನೆಯಾಗಿದೆ. ಆದರೆ ರಿಪಬ್ಲಿಕನ್ಸ್ ಮತ್ತು ಪಕ್ಷೇತರರು ಕ್ಲಿಂಟನ್ ಮತ್ತು ಬರಾಕ್ ಕುರಿತಂತೆ ಹೆಚ್ಚಿನ ಸಕಾರಾತ್ಮಕ ದೃಷ್ಟಿಕೋನ ಹೊಂದಿರುವುದಾಗಿಯೂ ಸಮೀಕ್ಷೆ ತಿಳಿಸಿದೆ.
ಅದೇ ರೀತಿ ಸಮೀಕ್ಷೆ ಪ್ರಕಾರ ಬುಷ್ ಮತ್ತು ಒಬಾಮಾ ಕುರಿತು ಸ್ವಲ್ಪ ವಿಭಿನ್ನ ದೃಷ್ಟಿಕೋನ ಹೊಂದಿದ್ದಾರೆ. ಪಕ್ಷೇತರರು ಒಬಾಮಾ ಪರ ಶೇ.50ರಷ್ಟು ಒಲವು ವ್ಯಕ್ತಪಡಿಸಿದ್ದರೆ, ಬುಷ್ ಪರ ಕೇವಲ ಶೇ.37ರಷ್ಟು ಒಲವು ತೋರಿದ್ದಾರೆ.
ಗ್ಯಾಲ್ಲೋಪ್ ಸಮೀಕ್ಷೆಯಲ್ಲಿ ಮೊದಲ ಬಾರಿಗೆ ಕ್ಲಿಂಟನ್ ಪರ ಅಮೆರಿಕನ್‌ರು ಒಬಾಮಾಗಿಂತ ಹೆಚ್ಚು ಒಲವು ತೋರಿದ್ದಾರೆ ಎಂದು ಹೇಳಿದೆ. ಆ ನಿಟ್ಟಿನಲ್ಲಿ ಒಬಾಮಾ ಶ್ವೇತಭವನ ಪ್ರವೇಶಿಸಿದ ನಂತರ ಮೊದಲ ಬಾರಿಗೆ ಒಬಾಮಾ ಅವರ ಪರ ಶೇ.52ರಷ್ಟು ಮಾತ್ರ ಒಲವು ವ್ಯಕ್ತಪಡಿಸಿರುವುದು ಕಂಡುಬಂದಿದೆ.